ಬೆಂಗಳೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಭರವಸೆ ನೀಡಿ ಒಂದು ತಿಂಗಳಲ್ಲಿ ಐದು ಕೋಟಿ ರೂಪಾಯಿ ಫಂಗನಾಮ ಹಾಕಿರುವುದಾಗಿ ದೂರು ನೀಡಲಾಗಿದೆ.
ಇದಕ್ಕೆ ಸಂಬಂಧಿಸಿದ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹದಿನೈದು ದೂರುಗಳು ಲಭಿಸಿವೆ. ಪ್ರತಿಯೊಬ್ಬರಿಗೆ 10ಲಕ್ಷ ರೂಪಾಯಿಯಿಂದ 50 ಲಕ್ಷರೂಪಾಯಿ ಕಳೆದುಕೊಂಡ ಕುರಿತು ದುರುಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಹೊರರಾಜ್ಯದವರು ವಂಚನೆಗೊಳಗಾಗಿದ್ದು, ಪ್ರವೇಶಪರೀಕ್ಷೆಯ ಬಳಿಕ ಮೆಡಿಕಲ್ ಪ್ರವೇಶಾತಿಗಾಗಿ ಕಾದಿದದ್ದವರನ್ನು ವಂಚಕ ತಂಡ ಬಲೆಗೆ ಹಾಕಿತ್ತು.
ಮೆಡಿಕಲ್ ಸೀಟುಕೊಡಿಸುವುದಾಗಿ ಭರವಸೆ ಕೊಟ್ಟು ವಂಚಕರ ತಂಡ ಭೂಗತವಾಗುತ್ತಿತ್ತು. ಇಂತಹ ತಂಡಗಳ ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಮೆಡಿಕಲ್ ಸೀಟಿಗೆ ಕಾಯುತ್ತಿರುವ ವಿದ್ಯಾರ್ಥಿಗಳ ಫೋನ್ ನಂಬರ್ಗಳನ್ನು ಸಂಗ್ರಹಿಸಿ ಅವರ ಹೆತ್ತವರನ್ನು ಸಂಪರ್ಕಿಸಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಭರವಸೆಕೊಟ್ಟು ಹಣವನ್ನು ಪಡೆದುಕೊಳ್ಳೂತ್ತಿತ್ತು. ಹೀಗೆ ಹಣಕೊಟ್ಟು ಕಾಲೇಜುಪ್ರವೇಶಕ್ಕಾಗಿ ಬೆಂಗಳೂರಿಗೆ ಬಂದ ನಂತರ ತಾವು ಮೋಸ ಹೋಗಿರವುದು ತಿಳಿಯುತ್ತಿತ್ತು.
ಕರ್ನಾಟಕದ ಹಲವು ಕಾಲೇಜುಗಳನ್ನು ಕೇಂದ್ರೀಕರಿಸಿ ಏಜೆಂಟುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರು ನಕಲಿ ಎಂದು ತಿಳಿದುಕೊಳ್ಳುವುದೇ ಕಷ್ಟದ ವಿಚಾರವಾಗಿದ್ದು, ಪಶ್ಚಿಮಬಂಗಾಳದ ಅರೆಸೈನಿಕಪಡೆಯ ಸಿಸ್ಟೆಂಟ್ ಕಮಾಂಡರ್ಗೆ 9.2 ಲಕ್ಷ ರೂಪಾಯಿ ನಷ್ಟವಾಗಿದೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಸುಭಾಶ್ ಎಂಬ ವ್ಯಕ್ತಿ ಮುಂಗಡ ಹಣ ಪಡೆದಿದ್ದನು. ಕಾಲೇಜಿಗೆ ಬಂದು ವಿಚಾರಿಸಿದಾಗ ಮೋಸ ಹೋದ ವಿಚಾರ ಬಹಿರಂಗವಾಗಿದೆ.
ಝಾರ್ಕಂಡಿನ ವ್ಯಕ್ತಿಗೆ 11.6 ಲಕ್ಷ ರೂಪಾಯಿ ನಷ್ಟವಾಗಿದೆ. ಕರ್ನಾಟಕದ ಎಕ್ಸಾಮಿನರ್ ಅಥಾರಿಟಿಯವನು ಎಂದು ಹೇಳಿದ ವ್ಯಕ್ತಿ ಹಣವನ್ನು ಪಡೆದುಕೊಂಡಿದ್ದಾನೆ. ತಮಿಳ್ನಡಿನ ಬಾಲಾಜಿಗೆ ಒಂಬತ್ತು ಲಕ್ಷ ರೂಪಾಯಿ ನಷ್ಟವಾಗಿದೆ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡುವುದಾಗಿ ವಾಗ್ದಾನ ಮಾಡಿ ಅವರಿಂದ ಹಣವನ್ನು ಪಡೆಯಲಾಗಿತ್ತು.