ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ- 250 ಗ್ರಾಂ, ಹೆಸರು ಕಾಳು- 150 ಗ್ರಾಂ, ರೆಡ್ ಕ್ಯಾಪ್ಸಿಕಮ್100 ಗ್ರಾಂ, ಎಲ್ಲೋ ಕ್ಯಾಪ್ಸಿಕಮ್- 100 ಗಾಂ, ಸ್ವೀಟ್ ಚಿಲ್ಲಿ ಸಾಸ್- 75 ಮಿಲ್ಲಿ,ಕೆಂಪು ಮೆಣಸು ಗುದ್ದಿದ್ದು- 20 ಗ್ರಾಂ,
ಉಪ್ಪು- 15 ಗ್ರಾಂ, ಎಣ್ಣೆ- ಅಗತ್ಯಕ್ಕೆ.
ತಯಾರಿಸುವ ವಿಧಾನ: ಬೆಂಡೆ ಕಾಯಿಯನ್ನು ಚೆನ್ನಾಗಿ ತೊಳೆಯಬೇಕು. ಹೆಸರು ಕಾಳನ್ನು ಬೇಯಿಸಿದ್ದು ಪ್ರತ್ಯೇಕವಾಗಿ ತೆಗೆದಿಡಿ. ಬೆಂಡೆಕಾಯಿಯ ಎರಡು ಬದಿಯನ್ನೂ ಕತ್ತರಿಸಿ ತೆಗೆದು ಉದ್ದಕ್ಕೆ ಭಾಗ ಮಾಡಿ ಕ್ಯಾಪ್ಸಿಕಮ್ ಕತ್ತರಿಸಿ ಇಡಬೇಕು. ಕ್ಯಾಪ್ಸಿಕಂ ಮತ್ತು ಬೆಂಡೆಕಾಯಿಯನ್ನು ಬೇರೆ ಬೇರೆಯಾಗಿ ಕಾಯಿಸಿ, ಅಧಿಕವಿರುವ ಎಣ್ಣೆಯಿಂದ ಬೇರ್ಪಡಿಸಿ. ಸ್ವೀಟ್ ಚಿಲ್ಲಿ ಸಾಸ್,
ಜಜ್ಜಿದ ಕೆಂಪು ಮೆಣಸಿನ ಅರ್ಧದಷ್ಟು ಸೇರಿಸಿ. ಅದಕ್ಕೆ ಉಪ್ಪನ್ನು ಸೇರಿಸಿ. ಈ ಸೋಸ್ಗೆ ಬೆಂಡೆಕಾಯಿ, ಕ್ಯಾಪ್ಸಿಕಂ, ಹೆಸರುಕಾಳು ಮೊದ
ಲಾಗಿ ತಯಾರಿಸಿದವುಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಪ್ಲೇಟ್ಗೆ ಹಾಕಿ ಉಳಿದ ಜಜ್ಜಿದ ಮೆಣಸನ್ನು ಹಾಕಿ ಬಡಿಸಬಹುದು.