ನವದೆಹಲಿ: 2016 ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 1000 ಮತ್ತು 500 ನೋಟುಗಳನ್ನು ರದ್ದುಗೊಳಿಸಿ ಎಲ್ಲ ಹಳೆಯ ನೋಟುಗಳು ಬ್ಯಾಂಕಿಗೆ ವಾಪಸು ಮಾಡಬೇಕೆಂಬ ದಿಢೀರ್ ಆದೇಶ ಹೊರಡಿಸಿದ್ದರು. ಈ ಸಂದರ್ಭದಲ್ಲಿ ಇಡೀ ದೇಶದಲ್ಲಿ ಜನರು ಬ್ಯಾಂಕುಗಳಲ್ಲಿ ನಿಂತು ತಮ್ಮ ಹಳೆಯ ನೋಟುಗಳನ್ನು ಜಮೆ ಮಾಡಿದ್ದರು. ಆದರೆ ವಾಪಸ್ಸಾಗಿದ್ದ ನೋಟುಗಳ ಬಗ್ಗೆ ಗೊಂದಲ ಒಂದಲ್ಲ ಒಂದು ರೀತಿಯಲ್ಲಿ ಇತ್ತು.

ಇದೀಗ ಆರ್.ಬಿ.ಐ ಅಧಿಕೃತವಾಗಿ 99 ಶೇ ಕ್ಕಿಂತ ಅಧಿಕ ನೋಟುಗಳು ಆರ್.ಬಿ.ಐಗೆ ವಾಪಸಾಗಿದೆ ಎಂಬ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಕಷ್ಟಕರವಾದಂತಹ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆಯೆಂದು ತಿಳಿಸಿದ್ದಾರೆ.

ಸರಕಾರ 1000 ಮತ್ತು 500 ರ ನೋಟಿನ ಬದಲಿಗೆ ಹೊಸ 2000 ನೋಟು ಮತ್ತು 500 ರ ನೋಟು ಚಾಲನೆಗೆ ತಂದಿತ್ತು. ಆರ್.ಬಿ.ಐ ಹೊಸ ನೋಟುಗಳನ್ನು ಮುದ್ರಿಸಲು ರೂಪಾಯಿ 7965 ಕೋಟಿಗಳನ್ನು ಖರ್ಚು ಮಾಡಿದೆ. 2017-18 ಕ್ಕೆ ಸೆಂಟ್ರಲ್ ಬ್ಯಾಂಕ್ ಇತರ ಹೊಸ ನೋಟುಗಳನ್ನು ಮುದ್ರಿಸಲು 4912 ಕೋಟಿ ಹಣವನ್ನು ವ್ಯಯಿಸಿದ ಬಗ್ಗೆ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದೆ.

Leave a Reply