ಯಾದಗೀರ್ : ಯಾದಗೀರ್ ನಗರ ಪುರಸಭೆಯ ಎಲ್ಲಾ 31 ವಾರ್ಡ್‌ಗಳಲ್ಲಿ ಎಲ್ಲಾ ಸಮುದಾಯದ 10,000 ನಿರ್ಗತಿಕ ಕುಟುಂಬಗಳಿಗೆ ಗುಣಮಟ್ಟದ 10 ಕೆಜಿ ಗೋಧಿ ಹಿಟ್ಟು (ಆಟಾ) ಆಹಾರ ಕಿಟ್ ವಿತರಿಸಲಾಗಿದೆ. ಸಿಎಂಸಿ ಯಾದಗೀರ್ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಅಜೀಜ್ ಅಹ್ಮದ್ ಶಹ್ನಾ ಅವರು ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯನ್ನು ನೋಡಿ ಈ ಯೋಜನೆ ರೂಪಿಸಿದ್ದಾರೆ.

ಹಸಿವಿಗೆ ಧರ್ಮ ಇಲ್ಲ. ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಏಕೋದರ ಸಹೋದರರು ಎಂಬ ಉದ್ದೇಶವನ್ನು ಮುಂದಿಟ್ಟು “ಒಂದು ಮಿಲಿಯನ್ ರೋಟಿ ಯೋಜನೆ” ರೂಪಿಸಿ ಅದನ್ನು ಅಕ್ಷರಶಃ ಕಾರ್ಯ ರೂಪಕ್ಕೆ ತಂದಿದ್ದಾರೆ. ಈ ಆಹಾರ ಕಿಟ್ ವಿತರಣೆ ಕಾರ್ಯದಲ್ಲಿ ಎಚ್‌ಆರ್‌ಎಸ್, ಟೀಮ್ ವೆಲ್ಫೇರ್, ಎಸ್‌ಐಒ ಮತ್ತು ಜಮಾತ್ ಇ ಇಸ್ಲಾಮಿ ಹಿಂದ್ ಯಾದ್ಗಿರ್ ಮುಂತಾದ ಸಂಘಟನೆಗಳ ಕಾರ್ಯಕರ್ತರು ಸಹಕಾರ ನೀಡಿದರು.

“ನಾವು ಲಾಕ್ ಡೌನ್ ವಿಷಮ ಪರಿಸ್ಥಿತಿಯಲ್ಲಿ ಕೇವಲ ಮನುಷ್ಯರನ್ನು ಮಾತ್ರ ನೋಡಿದ್ದೇವೆ. ಶೇಕಡಾ 70% ನಮ್ಮ ದೇಶಬಾಂಧವ ಸಮುದಾಯದವರು ಈ ಯೋಜನೆಯ ಫಲಾನುಭವಿಗಳು. ನಮ್ಮ ಧರ್ಮ, ಆಚಾರ ವಿಚಾರ ಬೇರೆಯಾಗಿರಬಹುದು, ಆದರೆ ನಾವೆಲ್ಲರೂ ಬಂಧುಗಳು, ಸಹೋದರರು ಸಮಾನರು” ಎಂದು ಅಝೀಝ್ ಶಾಹ್ನಾ ಅಭಿಪ್ರಾಯ ಪಟ್ಟರು

 

LEAVE A REPLY

Please enter your comment!
Please enter your name here