ಹಿಜಾಬ್ ಎಂಬುದು ಯಾವಾಗಲೂ ಚರ್ಚಿತ ವಿಷಯ ಆಗಿದೆ. ಹಿಜಾಬ್ ಧರಿಸಿ ಇಂದು ಮುಸ್ಲಿಂ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಧನೆ ತೋರುತ್ತಿದ್ದಾರೆ. ಫುಟ್ಬಾಲ್ ಆಟದ ಮೈದಾನದಲ್ಲಿ ಹಿಜಾಬ್ ಧರಿಸಿದ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಆಟವಾಡುವ ವೇಳೆ ಆಕೆಯ ಸ್ಕಾರ್ಫ್ ಕೆಳಗೆ ಬಿದ್ದು ಕೂದಲು ಕಾಣದಿರಲಿ ಎಂದು ಎದುರಾಳಿ ತಂಡದ ಆಟಗಾರರು ಆಕೆಯ ಸುತ್ತ ಕಾವಲು ನೀಡಿದ್ದಾರೆ. ವಿಶೇಷವೆಂದರೆ ಈ ಘಟನೆ ಮೈದಾನದಲ್ಲಿಯೇ ಆಟದ ಮಧ್ಯೆ ಸಂಭವಿಸಿದೆ.

ಈ ಘಟನೆ ಇತ್ತೀಚೆಗೆ ಜೋರ್ಡಾನ್‌ನಲ್ಲಿ ನಡೆದಿದ್ದು, ಶಬಾಬ್‌ ಅಲ್ ಒರ್ದೋನ್ ಕ್ಲಬ್ ಹಾಗೂ ಅರಬ್ ಆರ್ಥಡಾಕ್ಸ್‌ ಕ್ಲಬ್‌ ಮಹಿಳೆಯರ ಚಾಂಪಿಯನ್‌ಶಿಪ್‌ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಮನಸ್ಸು ಮಾಡಿದರೆ ಹಿಜಾಬನ್ನು ವಿವಾದಾತ್ಮಕ ವಿಷಯವಾಗಿ ಚರ್ಚಿಸಬಹುದು, ಅದೇ ಸಮಯದಲ್ಲಿ ಅದಕ್ಕೆ ಪಾಸಿಟಿವ್ ಆಗಿ ಸ್ಪಂದಿಸಿ ಗೌರವ ಕೊಡಬಹುದು.

https://twitter.com/i/status/1184183718195408896

https://twitter.com/i/status/1184183718195408896

LEAVE A REPLY

Please enter your comment!
Please enter your name here