ಶ್ರೀನಗರ: ಪಾಕಿಸ್ತಾನದ ಹೆಲಿಕಾಪ್ಟರ್ ಭಾರತದ ಆಕಾಶ ಗಡಿಯನ್ನು ಉಲ್ಲಂಘಿಸಿ ಭಾರದೆಡೆಗೆ ಬಂದಿತ್ತು ಎಂದು ವರದಿಯಾಗಿದೆ. ಪಾಕಿಸ್ತಾನದ ವಿಮಾನ ಜಮ್ಮುಕಾಶ್ಮೀರದ ಪೂಂಛ್ ಸೆಕ್ಟರಿನಲ್ಲಿ ಗಡಿದಾಟಿದ ಘಟನೆ ನಡೆದಿದೆ. ಭಾರತ ಸೇನೆ ಹೆಲಿಕಾಪ್ಟರಿಗೆ ಗುಂಡು ಹಾರಿಸಿ ಉರುಳಿಸಿಲು ನೋಡಿದೆ ಎಂದು ವರದಿ ತಿಳಿಸಿದೆ. ಗಡಿದಾಟಿ ಬಂದ560ಹೆಲಿಕಾಪ್ಟರ್‍ನ ದೃಶ್ಯಗಳನ್ನುಎನ್‍ಐಎ ಸುದ್ದಿ ಸಂಸ್ಥೆ ಬಹಿರಂಗಪಡಿಸಿದೆ.
ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಭಾರತದ ಆಕಾಶ ಪ್ರತಿರೋಧ ವ್ಯವಸ್ಥೆಯ ಗೂಢಚಾರಿಕೆ ನಡೆಸಲಿಕ್ಕಾಗಿ ವ್ಯೋಮ ಗಡಿಯನ್ನು ಉಲ್ಲಂಘಿಸಿದರೆ ಅದಕ್ಕೆ ಪ್ರತಿಕ್ರಿಯಿಸುವ ಭಾರತದ ಸಾಮರ್ಥ್ಯ ಎಷ್ಟು ಇದೆ ಎಂದು ಅಂದಾಜಿಸಲು ಹೆಲಿಕಾಪ್ಟರ್ ಗಡಿ ಉಲ್ಲಂಘಿಸಿ ಭಾರತದ ಆಕಾಶ ವಲಯವನ್ನು ಪ್ರವೇಶಿಸುತ್ತವೆ. ರವಿವಾರಕೂಡಾ ಹೆಲಿಕಾಪ್ಟರ್ ಈ ಉದ್ದೇಶದಿಂದ ಗಡಿ ಉಲ್ಲಂಘಿಸಿರಬಹುದು ಎನ್ನಲಾಗಿದೆ.
ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಈ ವರ್ಷ ಮೊದಲಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪೂಂಛ್ ನಿಯಂತ್ರಣ ರೇಖೆ ಹತ್ತಿರಕ್ಕೆ ಬಂದಿತ್ತು. ಭಾರತ ಪಾಕಿಸ್ತಾನಗಳ ನಡುವೆ 1991ರಲ್ಲಿಸಹಿಹಾಕಿದ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿ ಭಾರತದತ್ತ ಎಲಿಕಾಪ್ಟರ್ ಕಳುಹಿಸಿದೆ.
ಯುದ್ಧ ವಿಮಾನಗಳು ಎರಡು ದೇಶಗಳ ಗಡಿಗಿಂತ ಹತ್ತುಕಿಲೊಮೀಟರ್ ದೂರದಲ್ಲಿಮತ್ತು ಇತರ ವಿಮಾನಗಳು ಒಂದು ಕಿಲೊಮೀಟರ್ ದೂರವನ್ನು ಪ್ರವೇಶಿಸಬಾರದೆಂದು 1991ರ ಒಪ್ಪಂದದಲ್ಲಿ ತಿಳಿಸಲಾಗಿದೆ