ಇಸ್ಲಾಮಾಬಾದ್ : ಪಾಕಿಸ್ತಾನದ ಕರ್ತಾಪುರದಲ್ಲಿನ ಸಿಖ್ಖರ ಪವಿತ್ರ ಗುರುದ್ವಾರಕ್ಕೆ ತೀರ್ಥ ಯಾತ್ರೆಗೆ ಆಗಮಿಸುವ ಸಿಖ್ಖರಿಗೆ ವೀಸಾ ಅಗತ್ಯವಿಲ್ಲ. ಇಲ್ಲಿಗೆ ಸಿಖ್ಖ್ ತೀರ್ಥ ಯಾತ್ರಿಗಳು ವೀಸಾ ಇಲ್ಲದೆ ಬರಬಹುದು ಎಂಬ ಕೊಡುಗೆಯನ್ನು ಪಾಕಿಸ್ತಾನ ಸರಕಾರ ಮುಂದಿಟ್ಟಿದೆ.

ಪಾಕಿಸ್ತಾನದಲ್ಲಿ ಕ್ರಿಕೆಟಿಗ ಇಮ್ರಾನ್ ಖಾನ್ ಅಧ್ಯಕ್ಷರಾದ ಬಳಿಕ ಭಾರತ ಪಾಕ್ ಸಂಬಂಧ ಸುಧಾರಣೆಯತ್ತ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದರು. ಸಿಖ್ಖರಿಗೆ ವೀಸಾ ವಿನಾಯಿತಿ ಘೋಷಣೆ ಇಂತಹ ಕ್ರಮಗಳಲ್ಲಿ ಮೊದಲ ಹೆಜ್ಜೆ ಎನ್ನಲಾಗುತ್ತಿದೆ.

ಸಿಕ್ಖರ ಪವಿತ್ರ ಗುರುದ್ವಾರ ಕರ್ತಾಪುರದಲ್ಲಿದೆ. ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಸಿಖ್ಖ್ ತೀರ್ಥಯಾತ್ರಿಗಳು ವೀಸಾ ಇಲ್ಲದೆ ಕರ್ತಾಪೂರ್ ಸಾಹಿಬ್ ಗುರುದ್ವಾರಕ್ಕೆ ಬರಬಹುದು ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದಾರೆ.

ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ ಸಚಿವ ಚೌಧರಿ, ಕರ್ತಾಪೂರ್ ಗುರುದ್ವಾರ ಸಂದರ್ಶಿಸಲು ಹೊಸ ವ್ಯವಸ್ಥೆಯನ್ನು ಪಾಕಿಸ್ತಾನ ಸರಕಾರ ರೂಪಿಸುವುದು ಮತ್ತು ಇದಕ್ಕಾಗಿಯೇ ಪ್ರತ್ಯೇಕ ರಸ್ತೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಆದರೆ ಈ ವಿಷಯದಲ್ಲಿ ಹೆಚ್ಚಿನ ವಿವರಗಳು ಇನ್ನಷ್ಟೇ ದೊರಕಬೇಕಾಗಿದೆ. ವರ್ಷವಿಡೀ ತೀರ್ಥ ಯಾತ್ರೆಗೆ ಪಾಕಿಸ್ತಾನ ಅವಕಾಶ ಮಾಡಿಕೊಡುತ್ತದೆಯೆ ಎಂದು ಅದು ಸ್ಪಷ್ಟಪಡಿಸಿಲ್ಲ. ಮುಂದಿನ ವರ್ಷ 550ನೇ ಗುರು ನಾನಕ್ ಜಯಂತಿ ನಡೆಯಲಿದ್ದು, ಈ ಸಂದರ್ಭದಲ್ಲಿ ಮಾತ್ರ ತೀರ್ಥ ಯಾತ್ರಿಗಳಿಗೆ ವೀಸಾ ರಹಿತ ಗುರುದ್ವಾರ ಭೇಟಿಗೆ ಅವಕಾಶ ನೀಡಲಾಗುವುದೇ ಎಂದು ಸ್ಪಷ್ಟವಾಗಿಲ್ಲ.

ಸಾಂದರ್ಭಿಕ ಚಿತ್ರ

Leave a Reply