ಅಗರ್ತಲ: ಪಾಕಿಸ್ತಾನದಲ್ಲಿ ಸೇನೆ ಮತ್ತು ಐಎಸ್ಐ ಭಯೋತ್ಪಾದಕರು ಅಳ್ವಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ಗುಮಾಸ್ತನಾಗಿದ್ದಾರೆ ಎಂದು ಸ್ವಾಮಿ ಆರೋಪಿಸಿದರು.
ಇಮ್ರಾನ್ಖಾನ್ರನ್ನು ಪ್ರಧಾನಿಯೆಂದು ಕರೆಯುತ್ತಿರಬಹುದು. ಆದರೆ, ಅವರು ಓರ್ವ ಫ್ಯೂನ್ ಮಾತ್ರ ಆಗಿದ್ದಾರೆ.ಅಲ್ಲಿ ಆಡಳಿತ ನಡೆಸುತ್ತಿರುವುದು ಸೇನೆ ಮತ್ತು ಐಎಸ್ಐ ಭಯೋತ್ಪಾದಕರು. ಬಲೂಚಿಗಳು, ಸಿಂಧಿ ವಿಭಾಗಗಳು ಹಾಗೂ ಪಠಾಣ್ ವಿಭಾಗಗಳು ಪಾಕಿಸ್ತಾನದ ಭಾಗವಾಗಿರಲು ಬಯಸುವುದಿಲ್ಲ. ಈ ಮೂರು ವಿಭಾಗವಲ್ಲದೆ ಪಶ್ಚಿಮ ಪಂಜಾಬ್ನ್ನು ಸೇರಿಸಿದರೆ ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡುವುದೊಂದೇ ಪರಿಹಾರವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಉತ್ತರಿಸಲು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಶಕ್ತಿ ವ್ಯಯಿಸುವ ಅಗತ್ಯವಿಲ್ಲ ಎಂದು ನನ್ನ ಅಭಿಪ್ರಾಯವಾಗಿದೆ. ಆರೋಪಗಳಿಗೆ ಭಾರತ ಉತ್ತರ ಹೇಳುವಾಗ ಪಾಕಿಸ್ತಾನ ಆತ್ಮಾನಂದ ಅನುಭವಿಸುತ್ತದೆ. ಪಾಕಿಸ್ತಾನವನ್ನು ಕಡೆಗಣಿಸಿರಿ. ಸೇನೆಯನ್ನು ಸಜ್ಜುಗೊಳಿಸಿ ನಿಲ್ಲಿಸಿ ಪಾಕಿಸ್ತಾನವನ್ನು ನಾಲ್ಕು ಭಾಗವಾಗಿ ಒಡೆಯಿರಿ ಎಂದು ಸ್ವಾಮಿ ಹೇಳಿದರು.
ಪಾಕಿಸ್ತಾನದ ಬೆಂಬಲದಲ್ಲಿ ಭಾರತದ ಗಡಿದಾಟಿ ನಡೆಯುತ್ತಿರುವ ಭಯೋತ್ಪಾದನೆಯನ್ನು ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಬಲವಾಗಿ ವಿರೋಧಿಸಿದ್ದರು. ಇದರ ಬೆನ್ನಿಗೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿದ್ದಾರೆ.