ಬೇಕಾಗುವ ಸಾಮಗ್ರಿಗಳು:

ಕ್ರೀಮ್ ಇರುವ ಹಾಲು (Full Fat Milk) – 2 ಲೀಟರ್‌, ಲಿಂಬೆರಸ- 2 ಲಿಂಬೆ.

ತಯಾರಿಸುವ ವಿಧಾನ:

ಲಿಂಬೆಯನ್ನು ಹಿಂಡಿ ರಸ ತೆಗೆದು ಸೋಸಿ ಇಟ್ಟುಕೊಳ್ಳಿ, ಹಾಲನ್ನು 5 ನಿಮಿಷ ಕುದಿಸಿದ ಬಳಿಕ ಅದಕ್ಕೆ ಈ ಲಿಂಬೆರಸ ಸ್ವಲ್ಪ ಸ್ವಲ್ಪವೇ ಸೇರಿಸಿ. ಮೆಲ್ಲಗೆ ಮಿಶ್ರ ಮಾಡುತ್ತಿರಿ. ಹಾಲಿನಿಂದ ಪನೀರ್ ಬೇರ್ಪಡುವವರೆಗೆ ಲಿಂಬೆರಸ ಸೇರಿಸುತ್ತಿರಿ. ಪನೀರ್ ಪೂರ್ತಿಯಾಗಿ ಬೇರ್ಪಟ್ಟಾಗ ಬೆಂಕಿ ಆರಿಸಿ. ಬಳಿಕ ಒಂದು ಶುದ್ದ ವಾದ ಕಾಟನ್ ಬಟ್ಟೆಯಲ್ಲಿ ಇದನ್ನು ಹಾಕಿ ಸೋಸಿ, ಒಂದೆರಡು ಬಾರಿ ನೀರಿನಲ್ಲಿ ತೊಳೆದು ತೆಗೆಯಿರಿ.

ಲಿಂಬೆಯ ವಾಸನೆ ಹೋಗಲು ಹೀಗೆ ಮಾಡಬೇಕು. ಹೆಚ್ಚಾದ ನೀರು ಬೇರ್ಪಡಲು ಅದೇ ಬಟ್ಟೆಯಲ್ಲಿ ಕಟ್ಟಿ ಇಟ್ಟು ಅದರ ಮೇಲೆ ಭಾರವಾದ ಒಂದು ವಸ್ತುವನ್ನಿಡಿ. ಎರಡು ಗಂಟೆಗಳ ಬಳಿಕ ಅದನ್ನು ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ ಉಪಯೋಗಿಸಬಹುದು.

Leave a Reply