ಬೇಕಾಗುವ ಸಾಮಾನುಗಳು

ಮೆಣಸಿನ ಹುಡಿ – ಒಂದು ಟಿ ಸ್ಪೂನ್, ಕೊತ್ತಂಬರಿ ಹುಡಿ – ಒಂದು ಟಿ ಸ್ಪೂನ್, ಶುಂಠಿ ಬೆಳ್ಳುಳ್ಳಿ ಅರೆದದ್ದು – ಒಂದು ಚಮಚ, ಗರಂ ಮಸಾಲೆ – 1/2 ಚಮಚ, ಸೋಯಾ ಸಾಸ್ -1 ಚಮಚ, ಮೊಸರು -1 ಕಪ್, ಪನೀರ್ ತುಂಡುಗಳು – 1 ಕಪ್, ನೀರುಳ್ಳಿ -2, ಕ್ಯಾಪ್ಸಿಕಂ – ಒಂದು, ಟೊಮೆಟೊ -2, ಗೋಡಂಬಿ ಬಾಡಿಸಿದ್ದು -1 ಕಪ್, ಕೊತ್ತಂಬರಿ ಸೊಪ್ಪು ಪುದಿನ – ಸ್ವಲ್ಪ ಉಪ್ಪು , ಎಣ್ಣೆ – ಪಾಕಕ್ಕೆ

ತಯಾರಿಸುವ ವಿಧಾನ

1ರಿಂದ 6ರ ವರೆಗಿನ ವಸ್ತುಗಳ ಮಿಕ್ಸ್ ಮಾಡಿ ಮಸಾಲೆ ಮಾಡಿ. ಪನೀರನ್ನು ಎಣ್ಣೆಯಲ್ಲಿ ಕಾಯಿಸಿ ತೆಗೆಯಿರಿ. ಒಂದು ಪಾತ್ರೆಯಲ್ಲಿ ಎರಡು ಚಮಚ ಎಣ್ಣೆಗೆ ನೀರುಳ್ಳಿ ಹಾಕಿ ಬಾಡಿಸಿ. ಕ್ಯಾಪ್ಸಿಕಂ, ಟೊಮೊಟೊವನ್ನೂ ಬಾಡಿಸಿ, ಗೋಡಂಬಿ ಕಾಯಿಸಿದ್ದು ಮತ್ತು ಮೊದಲೇ ಮಾಡಿದ ಮಸಾಲೆಯನ್ನು ಸೇರಿಸಿ ಒಂದು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು , ಒಂದು ಕಪ್ ನೀರು ಸೇರಿಸಿ, ಕುದಿಯುವಾಗ ಪನೀರ್ ಸೇರಿಸಿ, ಕೊತ್ತಂಬರಿ ಸೊಪ್ಪು ಪುದಿನವನ್ನು ಸೇರಿಸಿ ಸ್ವಲ್ಪ ಸಮಯ ಮುಚ್ಚಿ ಇಟ್ಟ ನಂತರ ಉಪಯೋಗಿಸಿ.

ಸಾಂಧರ್ಬಿಕ ಚಿತ್ರ

LEAVE A REPLY

Please enter your comment!
Please enter your name here