* ಮಕ್ಕಳ ಪರೀಕ್ಷೆಯ ಕುರಿತು, ಪರೀಕ್ಷೆಯ ಸಮಯದ ಕ್ರಮದ ಕುರಿತು ಹೆತ್ತವರು ತಿಳಿದಿರಬೇಕು.
* ಒಂದು ಟೈಮ್ ಟೇಬಲ್ ರಚಿಸಲು, ಅದರಂತೆ ಕಲಿಕೆಯನ್ನು ಕ್ರಮೀಕರಿಸಲು ಅವರಿಗೆ ಸಹಾಯ ಮಾಡಬೇಕು.
* ಶಬ್ದ, ಗದ್ದಲಗಳಿಂದ ದೂರವಾದ, ಒಳ್ಳೆಯ ವಾಯು ಸಂಚಾರ, ಬೆಳಕು ಲಭಿಸುವ ವಾತಾವರಣ ಮಾಡಿಕೊಡಬೇಕು.
* ಆರೋಗ್ಯಕರವಾದ ಆಹಾರ ರೀತಿಯನ್ನು ತಯಾರಿಸಬೇಕು. ಕೊಬ್ಬು ಹೆಚ್ಚಿರುವ ಪದಾರ್ಥಗಳನ್ನು ಕೊಡಬೇಡಿ ಹಣ್ಣು, ಹಸಿರು ತರಕಾರಿಗಳು ಮೊದಲಾದವನ್ನು ಹೆಚ್ಚಿನ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಿ. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಆಹಾರ ಸೇವಿಸಲು ಪ್ರಯತ್ನಿಸಿ.

* ಮೊಬೈಲ್ ಫೋನ್ , ಟಿ.ವಿ., ಲ್ಯಾಪ್‍ಟಾಪ್ ಮೊದಲಾದ ಸ್ಕ್ರೀನ್‍ಗಳಿಂದ, ಸೋಶಿಯಲ್ ಮೀಡಿಯಾಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡುವ ಪ್ರಯತ್ನಿಸಿ. ಮತ್ತು ನೀವೂ ಸಾಧ್ಯವಾದಷ್ಟು ದೂರ ಇರಲು ಪ್ರಯತ್ನಿಸಿ.
* ರಾತ್ರಿಯಲ್ಲಿ ಮಕ್ಕಳಿಗೆ ಒಳ್ಳೆಯ ನಿದ್ದೆ ಲಭಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
* ಅವರಲ್ಲಿ ಅತೀ ನಿರೀಕ್ಷೆಯನ್ನು ಹೊರಬೇಡಿ. ಹೆತ್ತವರ ನಿರೀಕ್ಷೆಗಳು, ಮಾನಸಿಕ ಒತ್ತಡಗಳು ಮಕ್ಕಳೊಂದಿಗೆ ಹಂಚಿಕೊಳ್ಳಬೇಡಿ.
ಯಾವುದೇ ಒಂದು ಕಾರ್ಯವು ಯಶಸ್ವಿಯಾಗಬೇಕಾದರೆ ಅದರ ಸಿದ್ಧತೆಯು ಯೋಜನಾಬದ್ಧವಾಗಿರಬೇಕು.

*ಪರೀಕ್ಷೆಯಲ್ಲಿ ಇದು ಅತ್ಯಂತ ಮುಖ್ಯ. ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿ ಮೊತ್ತ ಮೊದಲನೇಯದಾಗಿ ಟೈಮ್ ಟೇಬಲ್ ಸಿದ್ಧಪಡಿಸಲಿ. ಇತರರ ವೇಳಾಪಟ್ಟಿಯನ್ನು ಹಿಂಬಾಲಿಸಲು ಪ್ರಯತ್ನಿಸಬೇಕು. ನಮ್ಮ ಸಮಯ, ಕಲಿಕೆಯ ಮಟ್ಟಕ್ಕೆ ಅನುಗುಣವಾದ ಟೈಮ್ ಟೇಬಲ್ ಸಿದ್ಧಪಡಿಸಿ, ಅದರಂತೆ ಕಲಿಯಲು ಅಭ್ಯಾಸ ಮಾಡಲು, ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಿರಿ. ಎಲ್ಲಾ ವಿದ್ಯಾರ್ಥಿಗಳಿಗೂ
ಶುಭವಾಗಲಿ.

ಪಿ.ಎ.ಎಂ. ಅಬ್ದುಲ್ ಖಾದರ್

Leave a Reply