ಮಂಡ್ಯ : ಅನೈತಿಕ ಸಂಬಂಧದಿಂದಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದು ಹೂತಿಟ್ಟ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ಅರಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಸತೀಶ್ ಎನ್ನುವ ವ್ಯಕ್ತಿ ಮೃತಪಟ್ಟ ದುರ್ದೈವಿ. ಈ ದಂಪತಿಗಳಿಗೆ ಹತ್ತು ವರ್ಷದ ಹಿಂದೆಯೇ ಮದುವೆಯಾಗಿದ್ದು, ಮುದ್ದಾದ ಒಂದು ಗಂಡು ಮಗುವಿದೆ. ಪತ್ನಿ ಕಾವ್ಯ ಅನೈತಿಕ ಸಂಬಂಧಕ್ಕೆ ಒಳಪಟ್ಟು ಇಂತಹ ದೊಡ್ಡ ಕ್ರೈಮ್ ಮಾಡಿ ಬಿಟ್ಟಿದ್ದಾಳೆ ಎಂದು ವಿಚಾರಣೆಯ ಬಳಿಕ ತಿಳಿದು ಬಂದಿದೆ. ತಿಂಗಳ ಹಿಂದೆ ಈ ಕೃತ್ಯ ಎಸಗಿದ್ದು, ಪತಿ ಕಾಣೆಯಾಗಿದ್ದಾರೆ ಎಂದು ನಾಟಕವಾಡಿದ್ದಳು. ಆದರೆ ಪೊಲೀಸರಿಗೆ ಕಾವ್ಯಳ ಮೇಲೆ ಸಂಶಯ ಬಂದಿದ್ದು, ಕೊನೆಗೆ ತನಿಖೆಯಲ್ಲಿ ಎಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ. ಪೋಲೀಸರ ಸಮ್ಮುಖದಲ್ಲಿ ಶವವನ್ನು ಹೊರ ತೆಗೆಯಲಾಗಿದ್ದು, ಶವವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದೆ. ಪ್ರಿಯಕರ ಅರ್ಜುನ್ ನನ್ನು ಬಂಧಿಸಲಾಗಿದ್ದು, ಕೃತಯದಲ್ಲಿ ಭಾಗಿಯಾದ ಉಳಿದ ಐವರ ಮೇಲೆ ಪ್ರಕರಣ ದಾಖಲಿಸಾಲಾಗಿದೆ.

Leave a Reply