ಉಜ್ಜಯಿನಿ : ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಶಶಿಕಲಾ ಅವರ ಸಾಧನೆಯೇ ಸಾಕ್ಷಿ. ಅವರು ತಮ್ಮ 80 ನೇ ವಯಸ್ಸಿನಲ್ಲಿ ಸಂಸ್ಕೃತದಲ್ಲಿ ಪಿಎಚ್‌ಡಿ ಮಾಡಿದರು. ಉಪನ್ಯಾಸಕ ಹುದ್ದೆಯಿಂದ ನಿವೃತ್ತಿಯಾದ ನಂತರ, ಶಶಿಕಲಾ ಅವರು 2009-2011ರಲ್ಲಿ ಜ್ಯೋತಿಷ್ಯಶಾಸ್ತ್ರದಲ್ಲಿ ಎಂ.ಎ ಮಾಡಿದರು. ನಂತರ ಪಿಎಚ್‌ಡಿ ಮಾಡುವುದಾಗಿ ನಿರ್ಧರಿಸಿದರು. ಇದಕ್ಕಾಗಿ ಅವರು ವರಹಮಿಹಿರಾ ಅವರ ಜ್ಯೋತಿಷ್ಯ ಗ್ರಂಥವಾದ ‘ವ್ರತ ಸಂಹಿತಾ’ ಅನ್ನು ಸಂಸ್ಕೃತದಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು.

ಮಹರ್ಷಿ ಪಾಣಿನಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಮಿಥಿಲಾ ಪ್ರಸಾದ್ ತ್ರಿಪಾಠಿ ಅವರ ಮಾರ್ಗದರ್ಶನದಲ್ಲಿ ಶಶಿಕಲಾ ಪಿಎಚ್‌ಡಿ ಮುಗಿಸಿದರು. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ತಮ್ಮ ಕೈಯಾರೆ ಪದವಿ ನೀಡಿ ಶಶಿಕಲಾ ರವರನ್ನು ಗೌರವಿಸಿದರು. ಮಾತ್ರವಲ್ಲ ಅವರ ಧೈರ್ಯ, ಇಚ್ಚಾಶಕ್ತಿ ಸಾಧನೆಯನ್ನು ಶ್ಲಾಘಿಸಿದರು.

ಸುದ್ದಿ ಸಂಸ್ಥೆ ಐಎಎನ್‌ಎಸ್ ಪ್ರಕಾರ, ಶಶಿಕಲಾ ಯಾವಾಗಲೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ನಿವೃತ್ತಿಯ ನಂತರ ಅಧ್ಯಯನ ಮಾಡಲು ಇದು ಒಂದು ದೊಡ್ಡ ಕಾರಣವಾಗಿತ್ತು. ಜ್ಯೋತಿಷ್ಯ ಓದುವುದರಿಂದ ಆಲೋಚನೆಗೆ ಭಿನ್ನ ನಿರ್ದೇಶನ ಸಿಕ್ಕಿದೆ ಎಂದು ಶಶಿಕಲಾ ಹೇಳುತ್ತಾರೆ. ಜ್ಯೋತಿಷ್ಯದ ಮೂಲಕ, ಜೀವನದ ಚಿಹ್ನೆಗಳನ್ನು ಓದುವುದರ ಮೂಲಕ ಸವಾಲುಗಳನ್ನು ನಿವಾರಿಸಬಹುದು ಎಂದು ಅವರು ಹೇಳಿದರು.

Leave a Reply