ಬೆಂಗಳೂರು: ಇಂದು ಎಲ್ಲದಕ್ಕೂ ಪಿಒಪಿ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಬಹಳ ಸುಲಭದಲ್ಲಿ ಅದು ದೊರಕುತ್ತದೆ. ಅದರಿಂದ ಗಣೇಶ ಮೂರ್ತಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಅಂತಹ ಮೂರ್ತಿಗಳ ವಿರುದ್ಧ ಅರ್ಚಕರ ಒಕ್ಕೂಟ ಹೇಳಿಕೆ ನೀಡಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದರೆ ಅದು ಅನಿಷ್ಟವಾಗಿದ್ದು ಅಂತಹ ಗಣಪತಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಮಾತ್ರವಲ್ಲ ಅದು ಪೂಜೆಗೆ ನಿಷಿದ್ಧವಾಗಿದೆ. ಪಿಒಪಿ ಗಣಪತಿ ನೀರಿನಲ್ಲಿ ಕರಗದೇ ಬಾಕಿ ಉಳಿಯುತ್ತದೆ. ಅದು ಪ್ರಕೃತಿಗೂ ಮಾರಕ ಎಂದು ಅರ್ಚಕರ ಒಕ್ಕೂಟದ ಮುಖ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಹೇಳಿದ್ದಾರೆ.
ಕೇವಲ ಭಕ್ತಿ ಮಾತ್ರ ಇದ್ದರೆ ಸಾಲದು ಅದರ ಜೊತೆ ಧರ್ಮದ ಜ್ಞಾನವೂ ಇರಬೇಕು. ಇಲ್ಲದಿದ್ದರೆ ದೇವರು ಒಲಿಯುವುದಿಲ್ಲ. ಭಾರತೀಯ ಪೂಜಾ ಪದ್ಧತಿ ಆದ್ಯಾತ್ಮ ಮತ್ತು ವಿಜ್ಞಾನದ ತಳಹದಿಯಿಂದ ಕೂಡಿದೆ ಎಂದು ಅಭಿಪ್ರಾ ಪಟ್ಟರು.
ಈ ಹಿಂದೆ ಪಿಒಪಿ ಗಣೇಶ ವಿಗ್ರಹವನ್ನು ತಯಾರಿಸುತ್ತಿದ್ದ ನಾಲ್ಕು ಘಟಕಗಳಿಗೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆ 853 ಗಣೇಶ ವಿಗ್ರಹಗಳನ್ನು ವಶಪಡಿಸಿ ಘಟಕಗಳಿಗೆ ಬೀಗಮುದ್ರೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.