Photo Credit : moneycrashers

ಲಂಚ್ ಬಾಕ್ಸ್ ಸಿದ್ಧಪಡಿಸುವ ವೇಳೆ ತಾಯಂದಿರ ತಲೆಯಲ್ಲಿ ಮಕ್ಕಳಿಗೆ ಆರೋಗ್ಯಪೂರ್ಣ ಆಹಾರ ಕೊಡಬೇಕೆಂಬಮನಸ್ಸಿರುತ್ತದೆ. ಮಕ್ಕಳ ಇಷ್ಟವನ್ನು ನೋಡಿ ಸ್ಯಾಂಡಿವಿಚ್ ಕೊಡುವವರಿರುತ್ತಾರೆ. ಫಾಸ್ಟ್ ಫುಡ್‍ನ್ನು ಬೇರೆ ಬೇರೆ ವಿವಿಧತೆಯಲ್ಲಿ ಪ್ಯಾಕ್ ಮಾಡಿ ಕೊಡುತ್ತಾರೆ. ಮಕ್ಕಳು ಹಸಿದಿರಬಾರದು ಎಂಬುದು ಅಮ್ಮನ ಆಸೆಯಾಗಿರುತ್ತದೆ. ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪೋಷಕ ಆಹಾರ ಲಭಿಸುವುದು ಮುಖ್ಯವಾಗಿದೆ. ಅದರೆ ನೀವು ಕೊಡುವ ಲಂಚ್ ಬಾಕ್ಸ್ ಎಂತಹದ್ದು. ಅದು ಕೂಡ ಆರೋಗ್ಯಪೂರ್ಣ ಆಹಾರದಷ್ಟೇ ಹೆಲ್ದಿಯಾಗಿರುವುದು ಖೂಡಾ ಮುಖ್ಯವಾಗಿದೆ. ಪ್ಲಾಸ್ಟಿಕ್ ಲಂಚ್ ಬಾಕ್ಸನ್ನು ಹೆಚ್ಚಿನ ಅಮ್ಮಂದಿರು ಖರೀದಿಸುತ್ತಾರೆ. ಆದರೆ ಮಕ್ಕಳ ಆರೋಗ್ಯಕ್ಕೆ ಅದು ಉಪಯುಕ್ತವಲ್ಲ. ಹಾನಿಕರವಾಗಿದೆ.

1.ಪ್ಲಾಸ್ಟಿಕ್ ಕೆಮಿಕಲ್ ಹಾನಿಕಾರಕ ಆಗಿದೆ:

ಪ್ಲಾಸ್ಟಿಕ್ ಬಾಕ್ಸ್‍ನಲ್ಲಿ ಬಿಸಿಯೂಟ ಆಹಾರ ಏನೆ ಇದ್ದರೂ ಅದರಲ್ಲನ ಕೆಮಿಕಲ್ಸ್ ಹೊಟ್ಟೆ ಸೇರುತ್ತದೆ. ಇದು ನಂತರ ಮೆಲ್ಲಗೆ ನಮ್ಮ ಶರೀರದಲ್ಲಿ ಹಾನಿಯುಂಟುಮಾಡಬಲ್ಲದು. ಇದರಿಂದ ಕ್ಯಾನ್ಸರ್ ನಂತಹ ಭಯಾನಕರ ರೋಗ ಬರಬಹುದು.

2. ಇದು ಯಾವ ಕೆಮಿಕಲ್ಸ್:

ಟಿಫಿನ್ ಬಾಕ್ಸ್‍ನಲ್ಲಿ ಬೇರೆಬೇರೆ ರೀತಿಯ ಕೆಮಿಕಲ್ಸ್ ಇರುತ್ತದೆ. ಎಂಡೊಕ್ರೀನ್ ಡಿಸ್ಟ್ರಿಕ್ಟಿಂಗ್ ಟಿಫಿನ್ ಬಾಕ್ಸ್‍ನಲ್ಲಿ ಇರಬಹುದಾದ ಕೆಮಿಕಲ್ಸ್ ಆಗಿದ್ದು ಇದು ನಮ್ಮ ಶರೀರಕ್ಕೆ ಬಹಳ ಹಾನಿಕಾರಕವಾಗಿದೆ. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಬಿಸಿ ಆಹಾರ ಹಾಕಿದರೆ ಈ ಕೆಮಿಕಲ್ಸ್ ಆಹಾರದೊಂದಿಗೆ ಸೇರುವ ಸಾಧ್ಯತೆ ಇದೆ. ಇದು ಬಿಸಿ ಆಹಾರ ಹಾಕುವ ಮೊದಲು ಅದರಲ್ಲಿರುವುದಿಲ್ಲ. ಬಿಸಿ ತಾಗಿದೊಡನೆ ಅದು ಅದರಲ್ಲಿ ಉದ್ಭವವಾಗುತ್ತದೆ.

3. ಮೂಲೆಯಲ್ಲಿ ಫಂಗಸ್ ಜಮಾವಣೆಯಾಗಿರುತ್ತದೆ:

ಪ್ಲಾಸ್ಟಿಕ್ ಲಂಚ್ ಬಾಕ್ಸ್ ನೋಡುವುದಕ್ಕೆ ಚಂದ ಇರುತ್ತದೆ. ಆದರೆ ಅದನ್ನು ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ನಾವು ಅದನ್ನು ಮೇಲಿಂದ ಶುಚೀಮಾಡಿಬಿಡಬಹುದು. ಅದರ ಮೂಲೆಯಲ್ಲಿ ಆಹಾರ ಕಣ ಹೋಗಿ ಕೂತರೆ ಶುಚಿಮಾಡುವುದು ಕಷ್ಟ. ಹಾಗೆಯೇ ಮತ್ತೆ ಆಹಾರ ಹಾಕಿದರೆ ಅದರಲ್ಲಿ ಕೀಟಸೃಷ್ಟಿಯಾಗುತ್ತದೆ. ಇದು ಮಕ್ಕಳ ದೇಹ ಸೇರುವ ಸಾಧ್ಯತೆಯಿದ್ದು ಅಪಾಯಕಾರಿಯಾಗಿದೆ.

4. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ನ ಹಾನಿಯಿದು:

-ಇದರಿಂದ ಮಕ್ಕಳ ಆರೋಗ್ಯಕ್ಕೆ ಕೆಟ್ಟ ಪ್ರಭಾವಾಗುತ್ತದೆ. ನಿಧಾನವಾಗಿ ಇದರ ಪ್ರಭಾವ ಮಕ್ಕಳ ಆರೋಗ್ಯದಲ್ಲಿ ಗೋಚರಿಸುತ್ತದೆ.
-ಇದರಿಂದ ಮಕ್ಕಳಲ್ಲಿ ಹಸಿವು ಕಡಿಮೆ ಆಗುತ್ತದೆ. ಆಹಾರ ಸೇವಿಸಲು ನಿರಾಕರಿಸುತ್ತಾರೆ.
-ಟಿಫಿನ್ ಪ್ಯಾಕ್‍ನಲ್ಲಿ ರುಚಿಕರ ಆಹಾರ ಕೂಡ ಅರುಚಿಕರವಾಗಿ ಬಿಡುತ್ತದೆ. ಆಹಾರ ಹಾಳಾಗಿರುತ್ತದೆ.
-ಕ್ಯಾನ್ಸರ್‍ನಂತಹ ಮಹಾಮಾರಿ ಬರುವ ಸಾಧ್ಯತೆ ಇರುತ್ತದೆ.
– ಮಕ್ಕಳಲ್ಲಿ ಬೊಜ್ಜು ಬಹಳ ಬೇಗನೆ ಬಂದು ಬಿಡುತ್ತದೆ.
– ಇಂದು ಮಕ್ಕಳಲ್ಲಿ ಡಯಾಬಿಟಿಸ್ ಕಂಡು ಬರುತ್ತಿದೆ. ಇದಕ್ಕೆ ಒಂದು ಕಾರಣ ಪ್ಲಾಸ್ಟಿಕ್ ಪಾತ್ರೆಗಳನ್ನು ಹೆಚ್ಚೆಚ್ಚು ಬಳಸುವುದು ಎಂಬ ಅಭಿಪ್ರಾಯ ಇದೆ.
-ಪ್ಲಾಸ್ಟಿಕ್ ಕೆಮಿಕಲ್ಸ್ ಮಕ್ಕಳ ದೇಹಕ್ಕೆ ಸೇರಿದರೆ ಅವರಲ್ಲಿನ ರೋಗ ಪ್ರತಿರೋಧಕ ಶಕ್ತಿ ಕುಂಠಿತವಾಗಲು ಶುರುವಾಗುತ್ತದೆ.

Leave a Reply