ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ “ಭೂಮಿ ವೀರ” ಪ್ರಶಸ್ತಿ ಪ್ರಾಪ್ತವಾಗಿದೆ. ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ದೆಹಲಿಯಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಆಂತಾರಾಷ್ಟೀಯ ಸೌರಶಕ್ತಿ ಮೈತ್ರಿ ಜಾಲ ರಚನೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಹೊಸ ಸಹಕಾರ ಅವಕಾಶಗಳನ್ನು ತೆರೆದಿಟ್ಟ ಸಾಧನೆಗಾಗಿ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರಾನ್ ಜಂಟಿಯಾಗಿ ಈ ಪ್ರಶಸ್ತಿ ಗಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ “ಚಾಂಪಿಯನ್ಶಿಪ್ ಆಫ್ ದಿ ಅರ್ಥ್” ಪ್ರಶಸ್ತಿಯನ್ನು ಪರಿಸರ ರಕ್ಷಣೆಗೆ ಬದ್ಧರಾಗಿರುವ 125 ಭಾರತೀಯರಿಗೆ ಅರ್ಪಿಸಿದ ಅವರು, ಇದು ಬುಡಕಟ್ಟು, ಮೀನುಗಾರರು ಮತ್ತು ಭಾರತದ ರೈತರಿಗೆ ಸಂದ ಗೌರವವಾಗಿದೆ. ಪರಿಸರ ಸಂರಕ್ಷಣೆಗೆ ಅವರ ಬದ್ಧತೆಗೆ ಈ ಪ್ರಶಸ್ತಿ ಮತ್ತು ಗೌರವ ಎಂದು ಅವರು ಒತ್ತಿ ಹೇಳಿದರು.

Leave a Reply