ಸಿಯೋಲ್: ಅಂತಾರಾಷ್ಟ್ರೀಯ ಸಹಕಾರ ವೃದ್ಧಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗಾಗಿ ಮಹತ್ವದ ಕೊಡುಗೆ ನೀಡಿರುವವರಿಗೆ ಕೊಡಲಾಗುವ ದಕ್ಷಿಣ ಕೊರಿಯಾ ಪ್ರತಿಷ್ಠಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಸಹಕಾರ ಸುಧಾರಣೆ, ಜಾಗತಿಕ ಆರ್ಥಿಕ ಪ್ರಗತಿ ಉನ್ನತೀಕರಣ, ವಿಶ್ವದ ಕ್ಲಿಪ್ರ ಬೆಳವಣಿಗೆಯ ಬೃಹತ್ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಮೂಲಕ ಭಾರತೀಯರ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಚಾಲನೆ ಹಾಗೂ ಭ್ರಷ್ಟಾಚಾರ ನಿಗ್ರಹ ಮತ್ತು ಸಾಮಾಜಿಕ ಏಕತೆಗಾಗಿ ಮೋದಿ ನೀಡಿರುವ ಕೊಡುಗೆಗಳನ್ನು
ಪರಿಗಣಿಸಿ ಸಿಯೋಲ್ ಪೀಸ್ ಪ್ರೈಜ್ ಕಮಿಟಿ ಈ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಸಿರಿವಂತರು ಮತ್ತು ಬಡವರ ನಡುವೆ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಕಡಿಮೆ ಮಾಡಲು ಮೋದಿ ಆರ್ಥಿಕ ಸೂತ್ರ(ಮೋದಿನೋಮಿಕ್ಸ್) ಜಾರಿಗೊಳಿಸಿ ಭಾರತೀಯ ಮತ್ತು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಪ್ರಧಾನಿ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಇದನ್ನು ಪ್ರಶಸ್ತಿ ಸಮಿತಿ ಪರಿಗಣಿಸಿ 2018ರ ಸಿಯೋಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

Leave a Reply