ಲೋಕಸಭೆ ಚುನಾವಣೆಯಲ್ಲಿ 335 ಸ್ಥಾನಗಳನ್ನುಗೆದ್ದು ಇತಿಹಾಸ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಉತ್ತಮ ಗಳಿಕೆ ಹೊಂದಿಲ್ಲ. ಬಿಡುಗಡೆಯಾದ ಐದನೇ ದಿನದಂದು ಅದರ ಗಳಿಕೆ ಕಡಿಮೆಯಾಗಿದೆ. ಈ ಸಿನೆಮಾ ಮೋದಿಯವರಿಗೆ ಚುನಾವಣೆಯಲ್ಲಿ ಸಹಾಯವಾಗುವುದು ಎಂದು ಆರೋಪಿಸಿ ಉದ್ದೇಶಪೂರ್ವಕವಾಗಿ ಈ ಸಿನೆಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿತ್ತು. ಚುನಾವಣಾ ಫಲಿತಾಂಶದ ನಂತರ, ಮೇ 24 ರಂದು ಈ ಸಿನೆಮಾ ಬಿಡುಗಡೆಯಾಯಿತು, ಆದರೆ ಆರಂಭದಲ್ಲಿ ಈ ಚಲನಚಿತ್ರವು ಚೆನ್ನಾಗಿ ಕಲೆಕ್ಷನ್ ಮಾಡಿದರೂ ನಿಧಾನವಾಗಿ ಅದರ ಗ್ರಾಫ್ ಕುಸಿಯಿತು.

ಮೊದಲ ದಿನ ಶುಕ್ರವಾರ PM ನರೇಂದ್ರ ಮೋದಿ 2.88 ಕೋಟಿ ರೂ. ಎರಡನೇ ದಿನ 3.76 ಕೋಟಿ ಮತ್ತು ಮೂರನೇ ದಿನ 5.12 ಕೋಟಿ. ಸೋಮವಾರ, 2.41 ಮತ್ತು ಮಂಗಳವಾರ  3.76 ಕೋಟಿ, ಒಟ್ಟು 5 ದಿನಗಳಲ್ಲಿ ಈ ಚಿತ್ರವು 16.19 ಕೋಟಿ ರೂ. ಗಳಿಸಿದೆ.
ಈ ಚಿತ್ರದಲ್ಲಿ, ವಿವೇಕ್ ಓಬೆರಾಯ್ ನರೇಂದ್ರ ಮೋದಿ ಅವರ ಪಾತ್ರವನ್ನು ಅಭಿನಯಿಸಿದ್ದು, ಅವರ ತಂದೆ ಸುರೇಶ್ ಒಬೆರಾಯ್ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಒಟ್ಟು 1200 ಥಿಯೇಟರ್ಗಳಲ್ಲಿ ಏಕಕಾಲದಲ್ಲಿ ಈ ಚಲನ ಚಿತ್ರ ಬಿಡುಗಡೆಯಾಯಿತು.

Leave a Reply