ದೆಹಲಿ: ಯುವತಿ ಮಗಳನ್ನೂ ಅತ್ಯಾಚಾರಗೈದ ಬಗ್ಗೆ ರಮೇಶ್ ದಹಿಯಾ ಎಂಬ ಉಪ ಪೋಲೀಸ್ ವರಿಷ್ಟಾಧಿಕಾರಿಯ ವಿರುದ್ದ ಕೇಸು ದಾಖಲಿಸಲಾಗಿದೆ. ಉತ್ತರ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಪತಿಯ ಮರಣದ ಬಳಿಕ ಈ ವ್ಯಕ್ತಿ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆಂದು ಜುಲೈ ತಿಂಗಳಲ್ಲಿ ಮಹಿಳೆ ದೂರು ನೀಡಿದ್ದರು.

ಸೆಪ್ಟೆಂಬರ್ 18ಕ್ಕೆ ಮತ್ತೆ ಮಹಿಳೆ ಮತ್ತೊಂದು ದೂರು ಸಲ್ಲಿಸಿದ್ದಾರೆ. ತನ್ನನ್ನೂ ಮಗಳನ್ನು ಅತ್ಯಾಚಾರ ಮಾಡಿದ ಬಳಿಕ ಮಗನನ್ನು ಅಪಹರಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ಕುರಿತು ತನಿಖೆಗೆ ಕ್ರೈಮ್ ಬ್ರಾಂಚ್ ಗೆ ಒಪ್ಪಿಸಿರುವುದಾಗಿ ಪೋಲೀಸಧಿಕಾರಿ ನೂಪುರ್ ಪ್ರಸಾದ್ ತಿಳಿಸಿದ್ದಾರೆ. ಆದರೆ ನಾನು ಮಹಿಳೆಗೆ ಸಾಲ ನೀಡಿದ್ದು ಅದನ್ನು ಮರಳಿ ಕೇಳಿದ್ದಕ್ಕೆ ಈ ಲೈಂಗಿಕ ಆರೋಪ ಹೊರಿಸುತ್ತಿದ್ದಾರೆಂದು ರಮೇಶ್ ದಹಿಯಾ ಹೇಳಿದ್ದಾರೆ.

Leave a Reply