ಕಳ್ಳರು ವಿಭಿನ್ನ ರೀತಿಯಲ್ಲಿ ಎಡವಟ್ಟು ಮಾಡಿ ಪೋಲಿಸ್ ಅತಿಥಿಯಾಗೋದು ನಾವೆಲ್ಲ ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಡೆನ್ಮಾರ್ಕ್‌ನಲ್ಲಿ ಮಾದಕ ವಸ್ತು ಕಳ್ಳ ಸಾಗಾಣೆ ಮಾಡುತ್ತಿದ್ದ ಕಳ್ಳನೊರ್ವ ಸುಲಭವಾಗಿ ಪೋಲಿಸ್ ಅತಿಥಿಯಾದ ಘಟನೆ ನಡೆದಿದೆ.
ಕ್ರಿಸ್ಟಿಯಾನ ಮೂಲದ ಮಾದಕ ವಸ್ತು ಸಾಗಾಣೆದಾರ ಕೊಪೆನ್‌ಹೇಗನ್‌ನಲ್ಲಿ ದೊಡ್ಡ ಮೊತ್ತದ ಮಾದಕದ್ರವ್ಯಗಳನ್ನು ತೆಗೆದುಕೊಂಡು ಮನೆ ಕಡೆ ಓಡಿ ಹೋಗುತ್ತಿದ್ದ. ಅದೇ ದಾರಿಯಲ್ಲಿ ಪೊಲೀಸ್ ಕಾರು ಬಂದಿತು. ಅದನ್ನೇ ಟ್ಯಾಕ್ಸಿ ಎಂದು ಭಾವಿಸಿದ ಕಳ್ಳ ಹತ್ತಿ ಕುಳಿತ. ಪೊಲೀಸರು ಈತನನ್ನು ವಿಚಾರಣೆ ನಡೆಸಿದಾಗಲೇ ಆತನಿಗೆ ತಿಳಿದಿದ್ದು ಅವನು ಕೂತಿರುವ ವಾಹನ ಟ್ಯಾಕ್ಸಿ ಅಲ್ಲ, ಬದಲಾಗಿ ಪೊಲೀಸ್ ವಾಹನ ಎಂದು. ಸಧ್ಯಕ್ಕೆ ಕಳ್ಳ ಪೋಲಿಸರ ವಶದಲ್ಲಿದ್ದಾನೆ.