ಜಗಳ ಬಿಡಿಸಲು ಹೋದ ಪೊಲೀಸ್ ಕಮಾಂಡೋರನ್ನೇ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಂದ ಘಟನೆ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಮಾಕುಮ್ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಕಮಾಂಡೋ ಗಿರೀಶ್ ದತ್ತಾ (37) ಮೃತ ದುರ್ದೈವಿ. ಅವರು ಪೋಲಿಸ್ ತರಬೇತುದಾರರಾಗಿದ್ದು, ಡೆರ್ಗಾಂವ್ನ ಪೋಲಿಸ್ ಟ್ರೈನಿಂಗ್ ಕಾಲೇಜಿನಲ್ಲಿ ಪೋಸ್ಟ್ ಆಗಿದ್ದರು. ಕೇವಲ ಒಂದು ದಿನ ಮುಂಚೆ ಅವರು ತನ್ನ ಮನೆಗೆ ಬಂದಿದ್ದು ಆಗ ಈ ದುರ್ಘಟನೆ ಸಂಭವಿಸಿದೆ.
ತಂದೆಯ ಜೊತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ರಸ್ತೆ ಅಪಘಾತದ ಹೆಸರಲ್ಲಿ ವಾಗ್ವಾದ ನಡೆಯುತ್ತಿದ್ದುದನ್ನು ಗಮನಿಸಿದ ಗಿರೀಶ್ ಜಗಳ ಮಾಡುವವರ ಮಧ್ಯೆ ಮಧ್ಯಸ್ಥಿಕೆ ವಹಿಸಿ ಕಠಿಣ ಶಬ್ದಗಳನ್ನು ಬಳಸಿದ್ದರು.

ಹೀಗೆ ಘಟನಾ ಸ್ಥಳದಿಂದ ತೆರಳುವಾಗ ಶಸಸ್ತ್ರ ಹಲ್ಲೆಕೋರರು ಹಿಂಬದಿಯಿಂದ ಅವರ ಮೇಲೆ ಹಲ್ಲೆ ಮಾಡಿ ಹತ್ಯೆಗೈದರು ಎಂದು ಸ್ಥಳೀಯರು ಹೇಳಿದ್ದಾರೆ. ಸೋಮವಾರ, ಸ್ಥಳೀಯ
ನಿವಾಸಿಗಳು ಹತ್ಯೆಯನ್ನು ಪ್ರತಿಭಟಿಸಿ ಎನ್ಎಚ್ -38 ಅನ್ನು ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

Leave a Reply