ಹೈದರಾಬಾದ್ : ಮಿಲಾದುನ್ನಬಿ ಯನ್ನು ವಿಶ್ವದಾದ್ಯಂತ ಮುಸ್ಲಿಮರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮೆರವಣಿಗೆಗಳನ್ನು , ಬೈಕ್ ರ್ಯಾಲಿಗಳನ್ನು ಯುವಕರು ಸಂಘಟಿಸುತ್ತಾರೆ. ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಶ್ರೀ ಅಂಜನಿ ಕುಮಾರ್ ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.

ಪ್ರವಾದಿಯ ಹೆಸರಲ್ಲಿ ಈ ರೀತಿ ಬೈಕ್ ಸರ್ಕಸ್ ಮಾಡಿ ಅಪಘಾತ ಮಾಡಿ ತಮಗೆ ತಾವೇ ಹಾನಿ ಮಾಡಿಕೊಳ್ಳುವುದು ಪ್ರವಾದಿ ಮಹಮ್ಮದರು ಕಲಿಸಿ ಕೊಟ್ಟಿಲ್ಲ. ಮಾತ್ರವಲ್ಲ ಇತರರಿಗೂ ಇದರಿಂದ ತೊಂದರೆ ಕೊಡುವುದು ಇದು ಜನ್ಮದಿನಾಚರಣೆಯ ಸರಿಯಾದ ರೂಪವಲ್ಲ. ಬೈಕ್ ನಲ್ಲಿ ಚಲಿಸುವಾಗ ಹೆಲ್ಮೆಟ್ ಧರಿಸಿ, ಟ್ರಿಪಲ್ ರೈಡ್ ಮಾಡದಿರಿ. ಇದು ನಿಮ್ಮ ಹಿತಕ್ಕಾಗಿದೆ. ಯುವಕರ ಅಗತ್ಯ ದೇಶಕ್ಕೆ ನಗರಕ್ಕಿದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಕಾನೂನುಗಳನ್ನು ಪಾಲಿಸಿ. ನಾವೆಲ್ಲಾ ಸೇರಿ ಉತ್ತಮ ರೀತಿಯಲ್ಲಿ ಜನ್ಮ ದಿನ ಆಚರಿಸೋಣ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಮಿಲಾದುನ್ನಬಿಯನ್ನು ಉತ್ತಮ ರೀತಿಯಲ್ಲಿ ಆಚರಿಸಲು ನಮ್ಮ ಡಿಪಾರ್ಟ್ ಮೆಂಟ್ ಸಂಪೂರ್ಣ ತಯಾರಿ ನಡೆಸಿದೆ. ಮಾತ್ರವಲ್ಲ ಪ್ರವಾದಿ ಮುಹಮ್ಮದರ ಮಿಲಾದುನ್ನಬಿ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಮುಸ್ಲಿಂ ಧರ್ಮಗುರುಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

LEAVE A REPLY

Please enter your comment!
Please enter your name here