ಬಾಲ್ಕನಿಯಲ್ಲಿ ಕೂತು ಮಹಿಳೆಯರಿಗೆ ತನ್ನ ಗುಪ್ತಾಂಗ ತೋರಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಹರೀಶ್ ಚಂದ್ರ ಲಹಾನೆ ಎನ್ನುವ ಪೊಲೀಸ್ ಕಾನ್ಸ್‌ಟೇಬಲ್ ತನ್ನ ಮನೆಯ ಬಾಲ್ಕನಿಯಲ್ಲಿ ಇಬ್ಬರು ಮಹಿಳೆಯರ ಮುಂದೆ ಇಂತಹ ಅನುಚಿತ ಕೆಲಸ ಮಾಡಿದ್ದಕ್ಕಾಗಿ ಮುಂಬಯಿ ಪೊಲೀಸರು ಅವರನ್ನು ಅವರ ಮನೆಯಿಂದ ಬಂಧಿಸಿದರು.
ಮುಖ್ಯವಾಗಿ, ಇಬ್ಬರು ಮಹಿಳೆಯರು ಎದುರಿನ ಬಾಲ್ಕನಿಯಲ್ಲಿ ಎಂದಿನಂತೆ ಪರಸ್ಪರ ಮಾತನಾಡುತ್ತಿದ್ದರು, ಆ ವೇಳೆ ಹರೀಶ್ ಅವರಿಗೆ ಬೈದಿದ್ದು, ಬಳಿಕ ಅವರ ಮುಂದೆ ನಗ್ನವಾಗಿ ಬಂದು ನಿಂತನು ಎಂದು ಆರೋಪಿಸಲಾಗಿದೆ… ಭಾರತೀಯ ದಂಡ ಸಂಹಿತೆಯ 354 (ಎ) ಮತ್ತು 509 ಆಕ್ಟ್ ಮೇಲೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಹಿಳೆಯೊಂದಿಗೆ ಎಟಿಎಂ ಒಳಗೆ ವಿಕೃತ ವಾಗಿ ವರ್ತಿಸಿ ವ್ಯಕ್ತಿಯೊಬ ಪೋಲೀಸರ ಅಥಿತಿಯಾಗಿದ್ದ. ಮೊದಲು ಮಹಿಳೆಗೆ ಹಣ ಡ್ರಾ ಮಾಡಲು ಸಹಕರಿಸುತ್ತೇನೆ ಎಂದ ಆತ, ಅದಕ್ಕೆ ಮಹಿಳೆ ನಿರಾಕರಿಸಿದಾಗ ಕೆಟ್ಟದಾಗಿ ನಿಂದಿಸಲು ತೊಡಗಿದ್ದು, ಮಾತ್ರವಲ್ಲ ಮಹಿಳೆಗೆ ತನ್ನ ಗುಪ್ತಾಂಗ ತೋರಿಸಿ ವಿಕೃತ ಮೆರೆದಿದ್ದ. ಈ ಬಗ್ಗೆ ಮಹಿಳೆಯರು ವಿಡಿಯೋ ಸಮೇತ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಮಹಿಳೆ ನೀಡಿದ ದೂರನ್ನು ಆಧರಿಸಿ ಎಟಿಎಂನ ಸಿಸಿಟಿವಿಯನ್ನು ವೀಕ್ಷಿಸಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

Leave a Reply