ಚುನಾವಣಾ ಪ್ರಚಾರ ಸಭೆಗಳಲ್ಲಿ ಕೆಲವೊಮ್ಮೆ ರಾಜಕಾರಣಿಗಳು ಭಾವೋದ್ವೇಗಕ್ಕೆ ಒಳಗಾಗಿ ಹಲವಾರು ಭರವಸೆಗಳನ್ನು ನೀಡುತ್ತಾರೆ. ಕೆಲವೊಮ್ಮೆ ತಮ್ಮ ಆಕರ್ಷಕ ಮಾತುಗಳಿಂದ ಪ್ರೇಕ್ಷಕರನ್ನು ಆಕರ್ಷಿಸಲು ವಿವಿಧ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಕಾಂಗ್ರೆಸ್ ಶಾಸಕರಾದ ಸುರೇಂದರ್ ಕುಮಾರ್ ಹೀಗೆ ಘೋಷಣೆ ಕೂಗುವಾಗ ಪ್ರಮಾದ ಮಾಡಿದ್ದಾರೆ. ಪಕ್ಷದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ತನ್ನ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿಯವರ ಪರವಾಗಿ ಘೋಷಣೆ ಕೂಗುವ ಬದಲಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರಿಗೆ ಜಿಂದಾಬಾದ್ ಎಂದು ಹೇಳಿದ್ದಾರೆ.

ಪ್ರಿಯಾಂಕ ಚೋಪ್ರಾ ಜಿಂದಾಬಾದ್ ಎಂಬ ಘೋಷಣೆ ಕೂಗುವ ಮೂಲಕ ಸಾರ್ವಜನಿಕ ಸಭೆಯೊಂದರಲ್ಲಿ ಶಾಸಕ ಸುರೇಂದ್ರಕುಮಾರ್ ದೊಡ್ಡ ಎಡವಟ್ಟು ಮಾಡಿದ್ದು, ಈಗ ಆನ್ಲೈನ್ ನಲ್ಲಿ ವಿಡಿಯೋ ತುಂಬಾ ವೈರಲ್ ಆಗಿ ಟ್ರೊಲ್ ಆಗುತ್ತಿದೆ. ವಿಡಿಯೋದಲ್ಲಿ ಕಾಣುವಂತೆ ಕಾಂಗ್ರೆಸ್ ಮುಖಂಡ ಸುರೇಂದರ್ ಕುಮಾರ್ ಸಭಿಕರ ಮುಂದೆ ಘೋಷಣೆಯನ್ನು ಕೂಗುತ್ತಾರೆ. ಸೋನಿಯಾಗಾಂಧಿ ಜಿಂದಾಬಾದ್ ಕಾಂಗ್ರೆಸ್ ಪಕ್ಷ ಜಿಂದಾಬಾದ್ ರಾಹುಲ್ ಗಾಂಧಿ ಜಿಂದಾಬಾದ್ ಎಂದು ಹೇಳಿದ ಬಳಿಕ ಪ್ರಿಯಾಂಕ ಚೋಪ್ರಾ ಜಿಂದಾಬಾದ್ ಎಂದು ಹೇಳಿದ್ದಾರೆ. ಅವರ ಪಕ್ಕದಲ್ಲಿ ನಿಂತಿದ್ದ ಕಾಂಗ್ರೆಸ್ ನಾಯಕ ದೆಹಲಿ ಘಟಕದ ಮುಖ್ಯಸ್ಥ ಸುಭಾಷ್ ಚೋಪ್ರಾ ಅವರು ಈ ಘೋಷಣೆಯ ಯಡವಟ್ಟು ಕೇಳಿ ಬೆಚ್ಚಿಬಿದ್ದಿದ್ದಾರೆ.

 

LEAVE A REPLY

Please enter your comment!
Please enter your name here