ಗುವಾಹಟಿ : ಬಿಜೆಪಿಯ ಶಾಸಕರ ಜೊತೆ ಪಕ್ಷ ತೊರೆದು ಕಾಂಗ್ರೆಸ್ ಬೆಂಬಲದೊಂದಿಗೆ ಹೊಸ ಸರಕಾರ ರಚಿಸಲು ಅಸ್ಸಾಂ ಮುಖ್ಯ ಮಂತ್ರಿ ಸರ್ಬಾನಂದ ಸೊನೊವಾಲ್ ರಿಗೆ ಕಾಂಗ್ರೆಸ್ ಮುಖಂಡ ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ನಾಯಕ ದೇಬಾಬ್ರತಾ ಸೈಕಿಯಾ ಆಫರ್ ನೀಡಿದ್ದಾರೆ. ಈ ಹೊಸ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ವಿರುದ್ಧವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದಾರೆ. ಜನವರಿ 10 ರಿಂದ ಸಿಎಎ ಜಾರಿಗೆ ಬಂದಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಸೋನೊವಾಲ್ ತಮ್ಮ 30 ಶಾಸಕರೊಂದಿಗೆ ಬಿಜೆಪಿಯನ್ನು ತೊರೆದರೆ, ಅವರ ಪಕ್ಷವು ಅವರನ್ನು ಬೆಂಬಲಿಸುತ್ತದೆ. ಸೋನೊವಾಲ್ ಅವರ ನಾಯಕತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವುದನ್ನು ಖಚಿತಪಡಿಸುತ್ತದೆ ಎಂದು ಸೈಕಿಯಾ ಹೇಳಿದ್ದಾರೆ.

ಅಸ್ಸಾಂನಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಸೋನೊವಾಲ್ ಬಿಜೆಪಿಯನ್ನು ತೊರೆದು 30 ಶಾಸಕರೊಂದಿಗೆ ಸ್ವತಂತ್ರರಾಗಿ ಸರ್ಕಾರದಿಂದ ಹೊರಬರಬೇಕು. ಅಸ್ಸಾಂನಲ್ಲಿ ಬಿಜೆಪಿ ವಿರೋಧಿ ಮತ್ತು ಸಿಎಎ ವಿರೋಧಿ ಸರ್ಕಾರವನ್ನು ರಚಿಸಲು ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಸಮ್ಮಿಶ್ರ ಪಕ್ಷ ಅಸ್ಸಾಂ ಗಣ ಪರಿಷತ್ ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಅಸ್ಸಾಂ ಒಪ್ಪಂದವನ್ನು ಜಾರಿಗೆ ತರಲು ಹಲವಾರು ಮಂತ್ರಿಗಳು ಮತ್ತು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ಆಲ್ ಅಸ್ಸಾಂ ವಿದ್ಯಾರ್ಥಿ ಸಂಘ ಭರವಸೆ ನೀಡಿತ್ತು. ಒಪ್ಪಂದವನ್ನು ಜಾರಿಗೆ ತರಲು ಹಿಂಜರಿಯುತ್ತಿರುವುದರಿಂದ ಕೇಂದ್ರ ಬಿಜೆಪಿ ಸರ್ಕಾರದದಿಂದ ಹೊರಬನ್ನಿ. ಪರ್ಯಾಯ ಸರ್ಕಾರ ರಚಿಸಲು ಸಹಾಯ ಮಾಡುತ್ತೇವೆ ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here