ದೆಹಲಿಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗ ರಾಜಕೀಯ ಪ್ರಾರಂಭವಾಗಿದೆ. ದೆಹಲಿಯಲ್ಲಿ ಕೋಮು ಹಿಂಸಾಚಾರದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಕೇಂದ್ರ ಸರ್ಕಾರವನ್ನುತರಾಟೆಗೆ ತೆಗೆದು ಕೊಂಡಿದ್ದಾರೆ. ದೆಹಲಿ ಹಿಂಸಾಚಾರವನ್ನು ತಡೆಯುವಲ್ಲಿ ಗೃಹ ಸಚಿವ ಅಮಿತ್ ಶಾಹ್ ವಿಫಲ ಆಗಿದ್ದಾರೆ, ದೆಹಲಿಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಎಂದು ರಜನೀಕಾಂತ್ ಹರಿಹಾಯ್ದಿದ್ದಾರೆ. .

ನಾನು ಕೇಂದ್ರ ಸರಕಾರವನ್ನು ಬಲವಾಗಿ ಖಂಡಿಸುತ್ತೇನೆ. ಹಿಂಸಾಚಾರವನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಹೊರ ನಡೆಯಬೇಕು. ಗುಪ್ತಚರ ವೈಫಲ್ಯ ಗಲಭೆಗೆ ಮುಖ್ಯ ಕಾರಣ, ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಬೇಕು, ಅದು ಹಿಂಸಾತ್ಮಕವಾಗಬಾರದು, ಹಿಂಸೆಯ ಸ್ವರೂಪ ಪಡೆದರೆ ಅದನ್ನು ನಿಯಂತ್ರಿಸಬೇಕು ಎಂದು ರಜನೀಕಾಂತ್ ಹೇಳಿದರು.

ಒಂದು ವೇಳೆ ಸಿಎಎಯಿಂದ ಈ ದೇಶದ ಮುಸ್ಲಿಮರ ಮೇಲೆ ಪರಿಣಾಮ ಬೀರಿದರೆ ತಾನು ಮುಸ್ಲಿಮರೊಂದಿಗೆ ನಿಲ್ಲುತ್ತೇನೆ ಎಂದು ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಂಡರು. ಮಾಧ್ಯಮಗಳ ಒಂದು ಭಾಗವು ಬಿಜೆಪಿಯೊಂದಿಗಿನ ಒಡನಾಟದ ಬಗ್ಗೆ ನಟ ಬೇಸರ ವ್ಯಕ್ತಪಡಿಸಿದರು.

Leave a Reply