ವಾಷಿಂಗ್ಟನ್: ಅಮೇರಿಕದ ಪ್ರಸಿದ್ದ ಪಾಪ್ ಗಾಯಕ ಮಾಕ್ ಮಿಲ್ಲರ್ ಸಾವು. ಅಮಿತವಾದ ಡ್ರಗ್ ಬಳಕೆಯೇ ಇವರ ಸಾವಿಗೆ ಕಾರಣವೆಂದು ಹೇಳಲಾಗಿದೆ. ಈ ಇಪ್ಪತ್ತಾರರ ಹರೆಯದ ಪಾಪ್ ಗಾಯಕ ಮನೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಿಲ್ಲರ್ ಸ್ನೇಹಿತ ಈ ವಿಷಯವನ್ನು ಬಹಿರಂಗಪಡಿಸಿದರು.

ತೀವ್ರ ಖಿನ್ನರಾಗಿರುತ್ತಿದ್ದ ಮಿಲ್ಲರ್ ಇತ್ತೀಚೆಗೆ ತನ್ನ ಸ್ನೇಹಿತೆ, ಪ್ರಸಿದ್ದ ಗಾಯಕಿ ಅರಿಯಾನಾ ಗ್ರಾಂಟ್ ನಿಂದ ದೂರವಾಗಿದ್ದರು. ಮಿಲ್ಲರ್ ನಿಷೇಧಿತ ಮಾದಕ ವ್ಯಸನಿಯಾಗಿದ್ದರು ಎಂಬ ಆರೋಪವಿದೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಎರಡು ಬಾರಿ ಪೋಲೀಸರಿಂದ ಬಂಧನಕ್ಕೊಳಗಾಗಿದ್ದರು.

Leave a Reply