Photo Credit : ANI

ಕಾಂಗ್ರೆಸ್ ಮಹಾ ನಾಯಕಿ ಸೋನಿಯಾ ಗಾಂಧಿಯವರ ಕ್ಷೇತ್ರ ರಾಯ ಬರೇಲಿಯಲ್ಲಿ ಪ್ರಿಯಾಂಕಾ ವಾದ್ರಾ ರವರ ದೊಡ್ಡ ಪೋಸ್ಟರ್ ಅಂಟಿಸಲಾಗಿದೆ. ಉತ್ತರ ಪ್ರದೇಶ ರಾಯ ಬರೇಲಿಯಲ್ಲಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಲಾಗಿದೆ.

” ಮೇಡಂ ಪ್ರಿಯಾಂಕಾ ವಾದ್ರಾ ಕಾಣೆಯಾಗಿದ್ದಾರೆ. ಇಮೋಷನಲ್ ಬ್ಲಾಕ್ ಮೇಲರ್. ಕಣ್ಣುಗಳು ಅತ್ತೂ ಅತ್ತೂ ಬಳಲಿದವು ಆಜಾರೆ ಪರದೇಶಿ ಏಕ್ ಬಾರ್ ‘ ಎಂದು ಪೋಸ್ಟರ್ ನಲ್ಲಿ ಪ್ರಶ್ನಾರ್ಥಕ ಚಿಹ್ನೆಯಲ್ಲಿ ಬರೆಯಲಾಗಿದೆ.

ಹರ್ ಚಂದ್ ಪುರದ ರೈಲ್ವೆ ದುರ್ಘಟನೆಯ ಚೀತ್ಕಾರ, ಉಂಚ್ ಹಾರ್ ನಲ್ಲಿ ದುರ್ಘಟನೆಯ ಹಾಹಾಕಾರ, ರಾಲ್ ಪುರದಲ್ಲಿ ಮುಳುಗಿದವರ ರೋದನ, ಈ ಸಂದರ್ಭದಲ್ಲಿ ಎಲ್ಲೂ ಕಾಣ ಸಿಗಲಿಲ್ಲ ರಾಯ ಬರೇಲಿಯ ಸಂಬಂಧಿಕರು. ನವರಾತ್ರಿ, ದಸರಾ ದುರ್ಗಾ ಪೂಜಾ ಪ್ರಿಯಾಂಕಾ ವಾದ್ರಾ ಕಾಣ ಸಿಗಲಿಲ್ಲ. ಈದ್ ನಲ್ಲಿ ಕಾಣ ಸಿಗುತ್ತಾರೆಯೇ ಎಂದು ಪೋಸ್ಟರ್ ನಲ್ಲಿ ಮುದ್ರಿಸಲಾಗಿದೆ.

Leave a Reply