ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾದಾಗ, ದಲಿತ ಯುವತಿ ದಾನಮ್ಮ ಹತ್ಯೆಯಾದಾಗ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದ ಪ್ರಕಾಶ್ ರೈ ದೀಪಕ್ ಹತ್ಯೆಯಾದಾಗ ಯಾಕೆ ಸುಮ್ಮನಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಬಾಯಿ ತೆರೆದಿದ್ದಾರೆ.

“ಕೊಲೆಯಾದವರು ಯಾವುದೇ ಪಕ್ಷಕ್ಕೆ ಸೇರಿರಲಿ. ಅದು ರಾಕ್ಷಸ ಕೃತ್ಯ. ಕೊಲೆಗಾರರು ಯಾವುದೇ ಸಂಘಟನೆಗೆ ಸೇರಿದವರಿರಲಿ ಅವರು ರಾಕ್ಷಸರೇ. ಇದೊಂದು ಹೀನ ಕೃತ್ಯ” ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಬಲಪಂಥೀಯರ ವಿರುದ್ಧ ತನ್ನ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಪ್ರಕಾಶ್ ರೈ, ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಬಗ್ಗೆ ತುಟಿ ಪಿಟಕ್ ಎಂದಿಲ್ಲ ಎಂಬ ಟೀಕೆಗಳಿಗೆ ತೆರೆ ಇದೀಗ ಎಳೆದಿದ್ದಾರೆ.

Leave a Reply