ಕೇರಳದ ಮಲಪ್ಪುರಂ ನಗರದಲ್ಲಿರುವ ಮಸೀದಿಯಿಯೊಂದರಲ್ಲಿ 18 ನೇ ಶತಮಾನದ ಹಿಂದೂ ಹುತಾತ್ಮರನ್ನು ನೆನಪಿಸುವ ಸಂಪ್ರದಾಯ ಈಗಲೂ ಮುಂದುವರಿಯುತ್ತದೆ.

ಹುತಾತ್ಮನ ಹೆಸರು ಕುನ್ಹೆಲು. ಕುನ್ಹೆಲು 43 ಮುಸ್ಲಿಂ ಯೋಧರೊಂದಿಗೆ ಸೇರಿ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರು ಎಂಬ ಐತಿಹ್ಯ ಇದೆ. ಸುಮಾರು 290 ವರ್ಷಗಳ ಹಿಂದೆಯೇ ಕೋಝಿಕೋಡ್ ಆಡಳಿತಗಾರನು ಮಲಬಾರ್ ಮೇಲೆ ದಾಳಿ ಮಾಡಿದಾಗ ಈ ಹೋರಾಟ ನಡೆದಿತ್ತು ಎನ್ನಲಾಗುತ್ತದೆ.

ಕುನ್ಹೆಲು ಅಕ್ಕಸಾಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಯುದ್ಧದ ತೊಡಗಿರುವ ಅವರ ಮುಸ್ಲಿಮ್ ಸ್ನೇಹಿತರನ್ನು ಸೇರಿಕೊಂಡರು. ಯುದ್ಧವು ತೆರಿಗೆ ಸಂಬಂಧಿಸಿದ ವಿಷಯಕ್ಕೆ ನಡೆದಿತ್ತು.

ಮಸೀದಿಯಲ್ಲಿ ಹುತಾತ್ಮನ ಮೃತದೇಹವನ್ನು ದಫನ ಮಾಡಲಾಗಿತ್ತು. ಅವರಿಗೆ ಗೌರವಾರ್ಪಣೆ ಸಲ್ಲಿಸಲು ವಲಿಯಂಗಡಿ ಜಮ್ಮಾ ಮಸೀದಿಯಲ್ಲಿ ಮುಸ್ಲಿಮರು ಪ್ರತಿವರ್ಷ ಸೇರಿ ಪ್ರಾರ್ಥನೆ ಮಾಡುತ್ತಾರೆ. ಹುತಾತ್ಮ ಕುನ್ಹೆಲು ಅವರ ವಂಶಸ್ಥರನ್ನು ಈ ಪ್ರಾರ್ಥನೆಗೆ ಆಹ್ವಾನಿಸಲಾಗುತ್ತದೆ.

Leave a Reply