ಮಾನವನ ದುರಾಸೆಗೆ ಅರಣ್ಯನಾಶ ಆಗುತ್ತಿದೆ. ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನ ಇಲ್ಲ. ಮರಗಳ ನಾಶದಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಯಾವ ರೀತಿಯ ದುಷ್ಪರಿಣಾಮಗಳು ಸಂಭವಿಸುತ್ತದೆ ಎಂಬ ಬಗ್ಗೆ ಅಧಿಕಾರದಲ್ಲಿರುವವರು ತಲೆಕೆಡಿಸಿಕೊಳ್ಳುವುದಿಲ್ಲ. ಇಂಡೋನೇಷ್ಯಾದಲ್ಲಿ ದೈತ್ಯ ಕಾಡುಗಳನ್ನು ಕೆಲವೇ ದಿನಗಳಲ್ಲಿ ನೆಲಕ್ಕೆ ಉರುಳಿಸಲಾಯಿತು. ಇದೀಗ ಆಗ ಕಾಡಿನ ವನ್ಯಜೀವಿಗಳು ಈಗ ನಿರಾಶ್ರಿತರಾಗಿದ್ದಾರೆ.

ಕಾಡಿನಲ್ಲಿ ಉಳಿದಿರುವ ಏಕೈಕ ಮರಕ್ಕೆ ಗರ್ಭಿಣಿ ಗೊರಿಲ್ಲಾವೊಂದು ಆಂಟಿ ಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದು ಮನುಷ್ಯನ ಕ್ರೂರತನ ಮತ್ತು ವನ್ಯ ಮೃಗ ಮನುಷ್ಯರೊಂದಿಗೆ ಕಾಡನ್ನು ನಾಶ ಮಾಡಬೇಡಿ ಎಂದು ಅಸಹಾಯಕವಾಗಿ ಮನವಿ ಮಾಡುವಂತಿತ್ತು. ಬೂನ್-ಮೀ ಹೆಸರಿನ ಈ ಗೊರಿಲ್ಲಾ ಹಸಿವಿನಿಂದ ತುಂಬಾ ದುರ್ಬಲವಾಗಿತ್ತು. ತಾನು ಅಪ್ಪಿಕೊಂಡಿದ್ದ ಮರವನ್ನು ಬಿಡಲು ಹೆದರುತ್ತಿತ್ತು, ಏಕೆಂದರೆ ಬುಲ್ಡೋಜರ್‌ಗಳು ಇಡೀ ಕಾಡನ್ನು ಧ್ವಂಸಗೊಳಿಸುವುದನ್ನು ಅದು ಕಣ್ಣಾರೆ ನೋಡಿದೆ. ಆಹಾರಕ್ಕಾಗಿ ಅದು ಮರದಿಂದ ಕೆಳಗಿಳಿದಿಲ್ಲ.

ಯುಕೆ ಮೂಲದ ಚಾರಿಟಿ ಇಂಟರ್ನ್ಯಾಷನಲ್ ಸಂಸ್ಥೆಯೊಂದು ಸ್ಥಳಕ್ಕಾಗಮಿಸಿ ಹಸಿವಿನಿಂದ ಬಳಲುತ್ತಿರುವ ಈ ಪ್ರಾಣಿಯ ಜೊತೆ ಇತರ ಮೂರು ಪ್ರಾಣಿಗಳನ್ನು ರಕ್ಷಿಸಿದೆ.

LEAVE A REPLY

Please enter your comment!
Please enter your name here