ಕೋಲಾರದಲ್ಲಿ ಗರ್ಭಿಣಿ ಮಹಿಳೆ ಆಸ್ಪತ್ರೆಯ ವರಾಂಡದಲ್ಲಿ ಹೆರಿಗೆ ನೋವಿನಿಂದ ನರಳುವ ವಿಡಿಯೋ ಜನರ ಮನಸ್ಸನ್ನು ತುಂಬಾ ನೋಯಿಸಿದೆ. ಕೆಜಿಎಫ್ ನ ಸರಕಾರಿ ಆಸ್ಪತ್ರೆಯ ನೆಲದಲ್ಲಿ ಹೆರಿಗೆ ಬೇನೆಯಿಂದ ಚಡಪಡಿಸಿದ ಮಹಿಳೆಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವೈದ್ಯರು ಕಾಯಿಸಿದ್ದು, ಚಿಕಿತ್ಸೆ ನೀಡಲು ನಿರಾಕರಿಸಿದ ಪರಿಣಾಮವಾಗಿ ಕೊನೆಗೆ ಮಗು ಮೃತ ಪಟ್ಟ ಘಟನೆ ವರದಿಯಾಗಿದೆ. ಈ ಸಂಬಂಧ ಡಾ. ಸರ್ಜನ್ ಶಿವಕುಮಾರ್ ನನ್ನು ವಜಾಗೊಳಿಸಲಾಗಿದೆ. ಸಮೀನಾ ಹೆಸರಿನ ಗರ್ಭಿಣಿ ಮಹಿಳೆ ತನ್ನ ಗಂಡನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸೆ ಸಿಗದೇ ನಾಲ್ಕು ಗಂಟೆಯ ಬಳಿಕ ಅವರು ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ತಾಯಿಯನ್ನು ಪಾರು ಮಾಡಲಾಗಿದ್ದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.

Leave a Reply