ಸಾಂದರ್ಭಿಕ ಚಿತ್ರ

ಸೂರತ್: ತಾಯಿಯ ಚಿಕಿತ್ಸೆಗೆ ಹಣ ಸಹಾಯ ಮಾಡುವೆ ಎಂದು ಹೇಳಿ ಯುವತಿಯನ್ನು ಎರಡು ಸಲ ಅತ್ಯಾಚಾರ ಮಾಡಿದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ಧಾಬೊಲಿ ಸ್ವಾಮೀ ನಾರಾಯಣ ದೇವಸ್ಥಾನದ 24 ವರ್ಷದ ನಿಕುಂಜ್ ಯಾನೆ ಕರಣ್ ಸ್ವರೂಪ್‍ ದಾಸ್ ಬಾಬುಭಾಯಿ ಸವಾನಿ ಎಂಬಾತನನ್ನು ಬಂಧಿಸಲಾಗಿದೆ.

ತಾಯಿಯ ಚಿಕಿತ್ಸೆಗೆ ಹಣಕ್ಕಾಗಿ ಪ್ರಯತ್ನಿಸುತ್ತಿದ್ದ ಇಪ್ಪತ್ತು ವರ್ಷದ ಯುವತಿಗೆ ಹಣ ಕೊಡುವೆ ಎಂದು ಹೇಳಿ ಈತ ಲೈಂಗಿಕ ಅತ್ಯಾಚಾರ ಮಾಡಿದ್ದನು.

ನಂತರ ಮತ್ತೊಮ್ಮೆ ಹಣ ಕೇಳಿ ಆತನನ್ನು ಹುಡುಕುತ್ತಾ ಹೋದಾಗ ದೇವಸ್ಥಾನದ ಸಮೀಪದ ಕೋಣೆಯಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಯುವತಿ ಅರ್ಚಕನ ದುಷ್ಕೃತ್ಯವನ್ನು ಮನೆಯಲ್ಲಿ ತಿಳಿಸಿದ್ದಳು. ನಂತರ ಅರ್ಚಕನ ವಿರುದ್ಧ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

Leave a Reply