ಕೊಟ್ಟಾರಕ್ಕರ: ಕೇರಳದ ಕಲಯಪುರಂ ಸೇಂಟ್ ತೆರೆಸಾ ಯುಪಿ ಶಾಲೆಯಲ್ಲಿ ಐದನೆ ತರಗತಿಯ ಬಾಲಕನ ತಲೆಗೆ ಪ್ರಿನ್ಸಿಪಾಲ್ ಮೊಬೈಲ್ ಫೋನ್‍ನಿಂದ ಹೊಡೆದು ತಲೆ ತೂತಾಗುವಂತೆ ಮಾಡಿದ್ದಾರೆ. ಬಾಲಕ ತರಗತಿಯಲ್ಲಿ ಮಾತಾಡಿದ್ದು ಪ್ರಿನ್ಸಿಪಾಲ್ ಕೋಪಕ್ಕೆ ಕಾರಣವಾಗಿತ್ತು. ಈ ಕೋಪದಲ್ಲಿ ಅವರು ಬಾಲಕ ಅಖಿಲೇಶ್(11) ತಲೆಗೆ ಬಲವಾಗಿ ಹೊಡೆದರು. ತತ್ಪರಿಣಾಮವಾಗಿ ಆತನ ತಲೆ ಒಡೆದು ರಕ್ತಸುರಿದಿತ್ತು. ಅಖಿಲೇಶ್ ಮೂಗ ಮತ್ತು ಕಿವುಡು ದಂಪತಿ ರಿತೀಶ್ ,ಲೇಖಾರ ಪುತ್ರನಾಗಿದ್ದು ಇವನಿಗೆ ಹೊಡೆದ ಪ್ರಿನ್ಸಿಪಾಲ್ ಸಿಸ್ಟರ್ ಜೊಬಿನ್‍ರನ್ನು ಶಾಲಾಡಳಿತ ಅಮಾನತಿನಲ್ಲಿರಿಸಿದೆ.

ಗಾಯಗೊಂಡ ಅಖಿಲೇಶನನ್ನು ಶಾಲೆಯ ವ್ಯಾನ್‍ನಲ್ಲಿ ಮನೆಗೆ ಕಳುಹಿಸಲಾಗಿದೆ. ಮಗುವಿನÀ ತಲೆಯಲ್ಲಿ ರಕ್ತದ ಕಲೆ ಕಂಡು ತಂದೆತಾಯಿ ವಿಚಾರಿಸಿದ ಸಿಸ್ಟರ್ ಹೊಡೆದದ್ದು ಎಂದು ತಿಳಿಸಿದ್ದಾನೆ. ನಂತರ ಬಾಲಕನನ್ನು ಕೊಟ್ಟಾರಕ್ಕರ ತಾಲೂಕಾಸ್ಪತ್ರೆಗೆ ಸೇರಿಸಿದ್ದಲ್ಲದೆ ಬಳಿಕ ಕೊಟ್ಟಾರಕ್ಕರ ಪೊಲೀಸರಿಗೆ ದೂರು ನೀಡಿದ್ದರು.

ಜನರ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ರಾತ್ರೋರಾತ್ರಿ ಬಾಲಕನ ಮನೆಗೆ ಬಂದು ಪ್ರಿನ್ಸಿಪಾಲ್ ಕ್ಷಮೆಯಾಚಿಸಿದ್ದಾರೆ. ಆದರೆ ಬಾಲಕನ ಪೋಷಕರು ಪ್ರಿನ್ಸಿಪಾಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಎಸ್ ಎಫ್‍ಐ-ಡಿವೈಎಫ್‍ಐ ಕಾರ್ಯಕರ್ತರು ಸ್ಕೂಲಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

Leave a Reply