ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರ ಕೈಯಿಂದ ಎಕೆ -47 ಗನ್ನನ್ನು ಕಿತ್ತುಕೊಂಡು ಫೈರಿಂಗ್ ಮಾಡಿದ ಘಟನೆ ವರದಿಯಾಗಿದೆ. ಆರೋಪಿಯ ಕೈಯಲ್ಲಿ ಎಕೆ -47 ಗನ್ನನ್ನು ಕಂಡು ಪೊಲೀಸರು ಗಲಿಬಿಲಿಗೊಂಡಿದ್ದು, ನಂತರ ಆತನ ಕಾಲಿಗೆ ಗುಂಡಿನ ದಾಳಿ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಈತನ ಹೆಸರು ಮೊಹಸೀನ್ ಎಂದಾಗಿದ್ದು, ಈ ಆರೋಪಿಯ ಮೇಲೆ ಲೂಟಿ ಸೇರಿದಂತೆ ಹಲವಾರು ಪ್ರಕರಣಗಳಿವೆ.

ಚಕೇರಿ ಠಾಣೆಯ ವ್ಯಾಪಿಯಲ್ಲಿ ಈ ಘಟನೆ ನಡೆದಿದ್ದು, ಈತ ಸ್ಥಳೀಯ ವ್ಯಾಪಾರಿಯನ್ನು ಲೂಟಿ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದ. ರಾತ್ರಿಯ ಹೊತ್ತು ಲೂಟಿ ಮಾಡುವ ಗ್ಯಾಂಗ್ ಗೆ ಸೇರಿದವನು ಎಂದು ತಿಳಿದು ಬಂದಿದೆ. ಈತನ ಇತರ ಲೂಟಿಯ ಸ್ಥಳಗಳನ್ನು ಪರಿಶೀಲಿಸುವ ವೇಳೆ ಈತ ಪೋಲೀಸರ ಕೈಯಿಂದ ಎಕೆ -47 ಗನ್ನನ್ನು ಕಸಿದು ಕೊಂಡಿದ್ದಾನೆ. ಪೋಲೀಸರ ವಿರುದ್ಧ ಗುಂಡು ಹಾರಿಸುವ ವೇಳೆ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ಗಾಯ ಗೊಳಿಸಿದರು. ನಂತರ ಈತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

Leave a Reply