ನವದೆಹಲಿ : ಕಟ್ಟಾ ಕಾಂಗ್ರೆಸ್ ವ್ಯಕ್ತಿ ಸರ್ದಾರ್ ಪಟೇಲ್ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಗೌರವಾದರ ನೀಡುತ್ತಿರುವುದು ನನಗೆ ಅತ್ಯಂತ ಖುಷಿ ತಂದುಕೊಟ್ಟಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿಗೆ ಅವರದೇ ಆದ ಸ್ವಾತಂತ್ರ್ಯ ಹೋರಾಟಗಾರರಿಲ್ಲ. ಬಹುತೇಕ ಎಲ್ಲರೂ ಕಾಂಗ್ರೆಸ್ ಜತೆ ಹೊಡೆತ ಒಡನಾಟ ಹೊಂದಿದ್ದವರು, ಅಲ್ಲದೆ ಸರ್ದಾರ್ ಪಟೇಲ್ ಅವರ ಶತ್ರುಗಳು ಸಹಿತ ಅವರನ್ನು ಪೂಜಿಸಲು ಬಯಸುತ್ತಿದ್ದಾರೆ ಎಂದಿದ್ದಾರೆ.

ಸರ್ದಾರ್ ಪಟೇಲ್ ಕಾಂಗ್ರೆಸ್ನ ಸಮರ್ಪಿತ ನಾಯಕ ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ನಂಬಿದ್ದರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ನಿಕಟವರ್ತಿಯಾಗಿದ್ದರು. ಮಾತ್ರವಲ್ಲ ಆರೆಸ್ಸೆಸ್ಸನ್ನು ವಿರೋಧಿಸುತ್ತಿದ್ದರು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here