ಇದುನಮ್ಮಊರು: ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದ ಸೈನಿಕರ ಕುಟುಂಬ ಯಾವಾಗಲೂ ನಮಗೆ ಮೊದಲ ಆದ್ಯತೆಯಾಗಿದೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತಾಯಿಯೋರ್ವರು ಮೂತ್ರ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ಬಳಿ ಹಣ ಇರಲಿಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಮೂತ್ರತಜ್ಞರಾದ ವೈದ್ಯ ಅಲ್ತಾಫ್ ಶೇಕ್ ಆ ತಾಯಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಉಚಿತ ಚಿಕಿತ್ಸೆ ನೀಡಿದ ಬಳಿಕ ಆ ತಾಯಿಯನ್ನು ಡಿಸ್ಚಾರ್ಜ್ ಮಾಡಿದಾಗ, ಅವರು ವೈದ್ಯರನ್ನು ತಬ್ಬಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು. ಈ ವಿಡಿಯೋವನ್ನು ಐಪಿಎಸ್ ದೀಪನ್ಶು ಕಬ್ರಾ ಹಂಚಿಕೊಂಡಿದ್ದು, ಆ ತಾಯಿಯನ್ನು ಗೌರವ ಮತ್ತು ಪ್ರೀತಿಯಿಂದ ಡಾಕ್ಟರ್ ಅಲ್ತಾಫ್ ತಬ್ಬಿಕೊಂಡು ಸಂತೈಸುವುದನ್ನು ಸಾಂತ್ವನ ನೀಡುವುದನ್ನು ನೋಡಬಹುದು.

ಐಪಿಎಸ್ ಅಧಿಕಾರಿ ವಿಡಿಯೋ ಟ್ವೀಟ್ ಮಾಡಿ, ಹುತಾತ್ಮನ ತಾಯಿ ಒಬ್ಬ ಮಗನನ್ನು ಕಳಕೊಂಡಿದ್ದಾರೆ. ಆದರೆ ಅವರಿಗೆ ಈಗ 135 ಕೋಟಿ ಮಕ್ಕಳಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ಕುಟುಂಬವನ್ನು ನೋಡಿಕೊಳ್ಳಲು ನಾವೆಲ್ಲರೂ ಡಾ. ಸಾಬ್ ಅವರಿಂದ ಸ್ಫೂರ್ತಿ ಪಡೆಯಬೇಕಾಗಿದೆ ಎಂದು ಅವರು ಬರೆದಿದ್ದಾರೆ.

Aurangabad Urologist Altaf Shaikh Offers Free Treatment to Poor Mother of Martyred Soldier | Clarion India
Aurangabad Urologist Altaf Shaikh

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ವೈದ್ಯ ಅಲ್ತಾಫ್, ಶಾಂತಾಬಾಯಿ ಸೊರಾದ್ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಬಡ ಕುಟುಂಬದಿಂದ ಬಂದವರು. ಅವರ ಪುತ್ರರಲ್ಲಿ ಒಬ್ಬರು ಹೃದಯಾಘಾತದಿಂದ ತೀರಿಹೋದರೆ ಮತ್ತೊಬ್ಬರು ಹುತಾತ್ಮರಾದರು. ಅಂತಹ ಪರಿಸ್ಥಿತಿಯಲ್ಲಿ ನಾನು ಆಸ್ಪತ್ರೆಯ ವ್ಯವಸ್ಥಾಪಕರಲ್ಲಿ ಉಚಿತ ಚಿಕಿತ್ಸೆಗಾಗಿ ಮಾತನಾಡಿದೆ. ಅದರ ಬಳಿಕ ನಾನು ಅವರಿಗೆ ಉಚಿತ ಚಿಕಿತ್ಸೆ ನೀಡಿದೆ ಎಂದು ಹೇಳಿದರು.

 

Leave a Reply