ನವದೆಹಲಿ: ರಾಜ್ಯವೊಂದರ ಮುಖ್ಯಮಂತ್ರಿಯೋರ್ವರು ಕೊಳಚೆ ಮೋರಿಗೆ ಇಳಿದು, ಕೊಳಚೆ ನೀರನ್ನು ಸಲ್ಕೆಯಿಂದ ಹೊರ ತೆಗೆದು, ಮೋರಿಯನ್ನು ಸ್ವಚ್ಛ ಮಾಡುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.

ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಸ್ವತಃ ಸ್ವಚ್ಛತಾ ಹಾಯ್ ಸೇವಾ ಯೋಜನೆಗೆ ಕಳೆದ ತಿಂಗಳು ಚಾಲನೆ ನೀಡಿ, ಸ್ವತಃ ಮೋರಿಯ ಕೊಳಚೆ ನೀರಿಗೆ ಇಳಿದು ಶುಚಿ ಗೊಳಿಸುವ ದೃಶ್ಯವನ್ನು ಕಾಣಬಹುದು.

ಪುದುಚೇರಿಯ ಮುಖ್ಯಮಂತ್ರಿ ಬಿಳಿ ಬಟ್ಟೆ ಮತ್ತು ಪಂಚೆಯನ್ನು ತೊಟ್ಟಿದ್ದರು. ಅವರ ಸುತ್ತಲೂ ಜನ ಸೇರಿದ್ದು, ರಸ್ತೆಯ ಬದಿಯಲ್ಲಿರುವ ಕೊಳಚೆ ನೀರನ್ನು ಹಾಯ್ದು ಶುಚಿಗೊಳಿಸುವ ಮೂಲಕ ಜನರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸಿದ್ದಾರೆ.

ಟ್ವಿಟ್ಟರ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಅಭಿನಂದಿಸಿದ್ದು, “ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಮತ್ತು ಸಮರ್ಪಿತ ಪ್ರಯತ್ನಗಳನ್ನು ನೋಡಿ ತುಂಬಾ ಖುಷಿಯಾಗಿದೆ, ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀವು ಮಾದರಿ ಆಗಿದ್ದೀರಿ . ನಮ್ಮ ದೇಶಕ್ಕೆ ಹೆಚ್ಚು ಸೇವೆ ಸಲ್ಲಿಸಲು ದೇವರು ನಿಮಗೆ ಹೆಚ್ಚು ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.


ಮುಂದಿನ ವರ್ಷ ಮಹಾತ್ಮಾ ಗಾಂಧಿಯವರ 150 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಮುನ್ನುಡಿಯಾಗಿ, ಶುಚಿತ್ವಕ್ಕೆ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಲು ‘ಸ್ವಚತ ಹಾಯ್ ಸೇವಾ’ ಚಳವಳಿಯನ್ನು ಪ್ರಾರಂಭಿಸಲಾಗಿದೆ ಎಂದರು.

Leave a Reply