ಸಂದರ್ಭಿಕ ಚಿತ್ರ

ಪುಣೆ: ಮನೆಗೆ ಟ್ಯೂಶನ್‍ಗೆ ಬಂದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮುಂದೆ 68 ವರ್ಷದ ಮುದುಕ ನಗ್ನತೆ ಪ್ರದರ್ಶಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯ 13 ವರ್ಷದ ಬಾಲಕಿಯ ಹೆತ್ತವರು ನೀಡಿದ ದೂರಿನಲ್ಲಿ ಟ್ಯೂಶನ್ ಅಧ್ಯಾಪಕಿಯ ತಂದೆಯನ್ನು ಪೊಲೀಸರು ಬಂಧಿಸಿದರು.

ಸೆಪ್ಟಂಬರ್ 25ರಿಂದ 27ರವರೆಗೆ ಮುದುಕನ ಹುಚ್ಚಾಟ ನಡೆದಿದೆ. ಬಾಲಕಿಯ ಮುಂದೆ ನಗ್ನತೆಯನ್ನು ಪ್ರದರ್ಶಿಸಿ ಕೆಟ್ಟದಾಗಿ ಸ್ಪರ್ಶಿಸಿದ್ದಾನೆ. ಆರೋಪಿಯ ಪುತ್ರಿ ಶಾಲಾ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದು, 13 ವರ್ಷದ ಬಾಲಕಿ ಕೂಡ ಮನೆ ಪಾಠಕ್ಕಾಗಿ ಬಂದಿದ್ದಳು. ಸೆಪ್ಟಂಬರ್ 25 ರಂದು ಟೆರೆಸ್‍ನಲ್ಲಿರಿಸಿದ್ದ ಬ್ಯಾಗಿನಿಂದ ಪುಸ್ತಕ ತರಲು ಹೋಗಿದ್ದಾಗ ಮುದುಕ ಮೊತ್ತಮೊದಲು ನಗ್ನತೆ ತೋರಿಸಿದ್ದ.ಬಾಲಕಿಯ ಹಿಂದಿನಿಂದ ಬಂದು ಹೀಗೆ ಮಾಡಿದ್ದ.

ಘಟನೆಯ ನಂತರ ಹೆದರಿದ ಬಾಲಕಿ ಹೆತ್ತವರಿಗೂ ತಿಳಿಸಿರಲಿಲ್ಲ. ಆದರೆ ಮರುದಿವಸವೂ ಹೀಗೆ ಮಾಡಿದ್ದರಿಂದ ಬಾಲಕಿ ಗತ್ಯಂತರವಿಲ್ಲದೆ ಹೆತ್ತವರಿಗೆ ತಿಳಿಸಿದ್ದಳು.

Leave a Reply