ಪಂಜಾಬ್‌ನ ಪಟಿಯಾಲದಲ್ಲಿ ಭಾನುವಾರ ನಿಹಾಂಗ್‌ಗಳ ಗುಂಪೊಂದು ದಾಳಿಸಿ 50 ವರ್ಷದ ಎಎಸ್‌ಐ ಕೈಯನ್ನು ಕತ್ತರಿಸಿದ್ದು, ಸುಮಾರು ಏಳು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ಬಳಿಕ ಚಂಡೀಗಢದ ಪಿಜಿಐಎಂಆರ್‌ನ ವೈದ್ಯರು ಆ ಕೈಯನ್ನು ಮತ್ತೆ ಜೋಡಿಸಿದ್ದಾರೆ.

ಪಂಜಾಬ್ ನಲ್ಲಿ ನಿಹಂಗರು ಪೊಲೀಸ್ ಸಿಬ್ಬಂದಿಯ ಕೈ ತುಂಡರಿಸಿದ್ದು, ಗಾಡಿ ಚಲಾಯಿಸಿ, ಬ್ಯಾರಿಕೇಡ್ ಮುರಿದಿದ್ದರು. ಪಂಜಾಬ್ ನ ಪರಿಯಾಲದ ಒಂದು ಮಾರುಕಟ್ಟೆಯಲ್ಲಿ ತಡೆದ ಕಾರಣ ನಿಹಾಂಗ್ ಗಳು (ಪರಂಪರಾಗತ ಶಸ್ತ್ರ ಇಟ್ಟು ಕೊಳ್ಳುವ ಸಿಖ್ಖರು) ಪೊಲೀಸ್ ಬ್ಯಾರಿಕೇಡ್ ಗೆ ವಾಹನ ದಿಂದ ಗುದ್ದಿ, ತಲವಾರಿನಿಂದ ಓರ್ವ ಎಎಸ್ಐ ಯ ಕೈ ತುಂಡರಿಸಿದ್ದರು. ಪಂಜಾಬ್ ನ ಡಿಜಿಪಿ ದಿನಕರ್ ಗುಪ್ತಾರ ಪ್ರಕಾರ, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮಾರುಕಟ್ಟೆ ಮಂಡಳಿಯ ಅಧಿಕಾರಿಯೊಬ್ಬರು ಸಹ ಗಾಯಗೊಂಡಿದ್ದಾರೆ. 7 ಆರೋಪಿಗಳನ್ನು ಒಂದು ಗುರುದ್ವಾರದಿಂದ ಬಂಧಿಸಲಾಗಿತ್ತು.

ಪ್ರೀಮಿಯರ್ ಇನ್ಸ್ಟಿಟ್ಯೂಟ್ ಪ್ರಕಾರ, ಪ್ಲ್ಯಾಸ್ಟಿಕ್ ಸರ್ಜರಿ ಇಲಾಖೆಯ ಮುಖ್ಯಸ್ಥ ಪ್ರೊಫೆಸರ್ ರಮೇಶ್ ಶರ್ಮಾ, ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಇದು ತಾಂತ್ರಿಕವಾಗಿಯೂ ಬಹಳ ಸಂಕೀರ್ಣ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯಾಗಿದ್ದು, ಇದನ್ನು ಯಶಸ್ವಿಯಾಗಿ ಮಾಡಲಾಗಿದೆ.

LEAVE A REPLY

Please enter your comment!
Please enter your name here