ಚುನಾವಣಾ ಸಮಯದಲ್ಲಿ ಒಂದಲ್ಲ ಒಂದು ಘಟನೆ ಸಂಭವಿಸುತ್ತ ಇರುತ್ತದೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕಿ ಬಿಬಿ ರಾಜೇಂದ್ರ ಕೌರ್ ಯುವಕನೋರ್ವನಿಗೆ ಕಪಾಲ ಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಗೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಾವು 25 ವರ್ಷ ಕಾಲ ಜನಪ್ರತಿನಿದಿಯಾಗಿದ್ದು ಏನು ಮಾಡಿದಿರಿ ಎಂದು ಯುವಕ ಪ್ರಶ್ನೆ ಕೇಳಿದ್ದಕ್ಕೆ ಅವರು ಕೋಪಗೊಂಡು ಕಪಾಲಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಕುಲದೀಪ್ ಎನ್ನುವ ಯುವಕ ಅವರೊಂದಿಗೆ ಈ ಕ್ಷೇತ್ರದ ಅಭಿವೃದ್ದಿಗಾಗಿ ಏನು ಮಾಡಿದ್ದೀರಿ ಎಂದು ಈ ಪ್ರಶ್ನೆ ಕೇಳಿದಾಗ ಮತ್ತೆ ಕೇಳು ಎಂದರು. ಕಾರ್ಯಕ್ರಮ ಮುಗಿದ ಬಳಿಕ ಯುವಕ ಮತ್ತೆ ಅದೇ ಪ್ರಶ್ನೆ ಕೇಳಿದಾಗ ರಾಜೇಂದ್ರ ಕೌರ್ ಆತನ ಕೆನ್ನೆಗೆ ಬಾರಿಸಲು ಕೈ ಎತ್ತಿದರು.

Leave a Reply