ಅಮೃತಸರ: ಪತಿಯನ್ನು ಬಂಧಿಸಲು ಬಂದ ಪೋಲೀಸರಿಗೆ ತಡೆಯಾದದ್ದಕ್ಕೆ ಮಹಿಳೆಯನ್ನು ಜೀಪಿ ಟಾಪಲ್ಲಿ ಮಲಗಿಸಿ ಪೋಲೀಸರು ಸಂಚರಿಸುವ ಶಿಕ್ಷೆ ನೀಡಿದ ಘಟನೆಯು ಪಂಜಾಬಿನ ಅಮೃತಸರದಲ್ಲಿ ನಡೆದಿದೆ. ಹೀಗೇ ಕೊಂಡುಹೋಗುವಾಗ ಜೀಪಿನಿಂದ ಕೆಳಕ್ಕುರುಳಿದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದೆ. ದಾರಿಯಲ್ಲಿ ಬಿದ್ದ ಮಹಿಳೆಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರು.

ಜಾಗದ ತಕರಾರಿಗೆ ಸಂಬಂಧಿಸಿ ಯುವತಿಯ ಪತಿಯ ತಂದೆಯನ್ನು ಹುಡುಕಿ ಪೋಲೀಸರು ಬಂಧಿದ್ದರು. ಆದರೆ ಪೋಲೀಸರು ಬಂದ ವೇಳೆಯಲ್ಲಿ ಮಾವ ಇರಲಿಲ್ಲ. ಆಗ ಪತಿಯನ್ನು ಕರೆದುಕೊಂಡು ಹೋಗಲು ಪೋಲೀಸರು ಮುಂದಾದರು. ಆಗ ಈ ಯುವತಿ ತಡೆಯೊಡ್ಡಿದ್ದರು. ಇದರಿಂದ ಕುಪಿತರಾದ ಪೋಲೀಸರು ಆಕೆ ಜೀಪಿನ ಟಾಪಲ್ಲಿರುವಂತೆಯೇ ಚಲಾಯಿಸಿದರು. ಯುವತಿಯನ್ನು ಕಟ್ಟಿ ಹಾಕಲಾಗಿತ್ತೇ ಎಂಬ ಕುರಿತು ತನಿಖೆ ನಡೆಯುತ್ತಿದೆ.

ಸಾಮಾಝಿಕ ಜಾಲತಾಣಗಳಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ವ್ಯಾಪಕವಾಗಿ ಆಕ್ರೋಶ ವ್ಯಕ್ತ ಪಡಿಸಲಾಗಿದೆ.

Leave a Reply