ಡೆಹ್ರಾಡೂನ್: ಪ್ರತಿಯೊಂದು ಧರ್ಮವನ್ನೂ ಸಮಾನತೆಯಿಂದ ಕಾಣುವ ಪಕ್ಷದ ತತ್ವ ಸಿದ್ಧಾಂತವಾಗಿದೆ ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಕಚೇರಿಯ ಗ್ರಂಥಾಲಯದಲ್ಲಿ “ಪವಿತ್ರ ಕುರಾನ್”ನ ಪ್ರತಿಯೊಂದನ್ನು ಪಕ್ಷದ ಕಾರ್ಯಕರ್ತರಿಗೆ ನೆರವಾಗಲೆಂದು ಇರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಮುಖ್ಯಸ್ಥ ದೇವೇಂದ್ರ ಭಾಸಿನ್ ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕ ಕೇಂದ್ರ ಕಚೇರಿಯ ಗ್ರಂಥಾಲಯದಲ್ಲಿ ಎರಡು ದಿನಗಳ ಹಿಂದೆ ಕುರಾನ್ ಪ್ರತಿಯನ್ನು ಇರಿಸಲಾಗಿದ್ದು, ಅಲ್ಪಸಂಖ್ಯಾತರನ್ನು ನಾವು ತಲುಪ ಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ಬಂದ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳನ್ನು ನಮ್ಮ ಕಾರ್ಯಕರ್ತರಿಗೆ ಸಿಗಬೇಕು ಎಂದು ಪಕ್ಷ ಬಯಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಆರಂಭಿಸಲಾಗಿರುವ ಗ್ರಂಥಾಲಯದಲ್ಲಿ ಸುಮಾರು 400 ಪುಸ್ತಕಗಳಿವೆ.

Leave a Reply