ಹೈದರಾಬಾದ್ : ಮುಸ್ಲಿಮರ ಅಝಾನ್ ಸಂಬಂಧಿಸಿದಂತೆ ರಾಚಕೊಂಡ ಪೊಲೀಸರ ಟ್ವಿಟರ್ ಪೋಸ್ಟ್ ವಿವಾದಕ್ಕೆ ಗುರಿಯಾಗಿತ್ತು. ಬಳಿಕ ಟ್ವಿಟರ್ ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಪೊಲೀಸರು ಟ್ವೀಟ್ ಅಳಿಸಿ ಹಾಕಿದ್ದಾರೆ. ರಾಚಕೊಂಡ ಪೊಲೀಸರು, “ಸರ್, ಅಜಾನ್ ಮತ್ತು ಸೈರನ್ ಗೆ ಅನುಮತಿ ಇಲ್ಲ ” ಎಂದು ಬರೆದಿದ್ದರು. ಈ ಟ್ವೀಟ್ ವೈರಲ್ ಆದ ಬಳಿಕ, ಮುಹಮ್ಮದ್ ಮುಜಾಹಿದ್ ಎಂಬ ಬಳಕೆದಾರರು ಟ್ವೀಟ್‌ನ ಸ್ಕ್ರಾಂಬೋರ್ಡ್ ಹಂಚಿಕೊಳ್ಳುವಾಗ, “ಜಾತ್ಯತೀತ ಮುಖ್ಯಮಂತ್ರಿಯವರೇ, ಅಜಾನ್ ಅಥವಾ ಸೈರನ್ ಸಮಸ್ಯೆ ಏನು?” ನಾವು ಯಾವುದೇ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ. ಸರ್ಕಾರದ COVID-19 ಮಾರ್ಗಸೂಚಿಗಳ ಪ್ರಕಾರ ನಾವು ಮನೆಯಲ್ಲಿಯೇ ಪ್ರಾರ್ಥಿಸುತ್ತಿದ್ದೇವೆ.”

ಬಳಿಕ ತಪ್ಪನ್ನು ಸರಿಪಡಿಸಿದ ರಾಚ್ಕೊಂಡ ಪೊಲೀಸರು ವಿವಾದಾತ್ಮಕ ಟ್ವೀಟ್ ಅನ್ನು ಅಳಿಸಿಹಾಕಿದ್ದಲ್ಲದೆ, ವಿವರಣೆಯನ್ನು ಸಹ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾ ಸೆಲ್ ನೀಡಿದ ತಪ್ಪು ಮಾಹಿತಿ ಎಂದು ಸ್ಪಷ್ಟನೆ ನೀಡಿದ್ದು, ತಪ್ಪು ಮಾಹಿತಿ ನೀಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಭರವಸೆ ನೀಡಿದರು.

Leave a Reply