Mandatory Credit: Photo by REX/Shutterstock (9411656bq) Rafael Nadal and his partner Maria Francisca Perello Good Money Gala, Amsterdam, Netherlands - 15 Feb 2018

ಮಲ್ಲೋರ್ಕಾ: ಟೆನಿಸ್ ಸೂಪರ್ ಸ್ಟಾರ್ ಸ್ಪೇನ್ ನ ರಫೆಲ್ ನಡಾಲ್ ಕೊನೆಗೂ ವಿವಾಹವಾಗಿದ್ದಾರೆ. ಶನಿವಾರ ನಡೆದ ಸಮಾರಂಭದಲ್ಲಿ ಬಹುಕಾಲದ ಗೆಳತಿ ಮಾರಿಯಾ ಫ್ರಾನ್ಸಿಸ್ಕಾ ಪೆರೆಲ್ಲೋ ಅವರನ್ನು ನಡಾಲ್ ವಿವಾಹವಾಗಿದ್ದಾರೆ. ಕಳೆದ 14 ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಸೆನ್ನ ಮಲೈರ್ಕಾದ ಪ್ರಸಿದ್ಧ ಲಾ ಫೋರ್ಟ್ ಲೆಜಾದಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ 33ರ ಹರೆಯದ ನಡಾಲ್ ತಮ್ಮ ಬಾಳಸಂಗಾತಿಯನ್ನು ವರಿಸಿದರು.

ಕಾರ್ಯಕ್ರಮದಲ್ಲಿ ಫೆಲಿಸಿಯಾನೊ ಲೋಪೆಜ್, ಡೇವಿಡ್ ಫೆರರ್ ಮುಂತಾದ ಟಿನಿಸ್ ಆಟಗಾರರು ಭಾಗವಹಿಸಿದ್ದರು. ಬಾಸೆಲ್‌ನ ಮುಂದಿನ ಪಂದ್ಯಾವಳಿಗೆ ಅಭ್ಯಾಸ ನಡೆಸುತ್ತಿರುವ ಕಾರಣ ರೋಜರ್ ಫೆಡರರ್ ಕಾರ್ಯಕ್ರಮದಲ್ಲಿ ಭಾಗಹಿಸಲಿಲ್ಲ ಎಂದು ವರದಿಯಾಗಿದೆ. 31ರ ಹರೆಯದ ಮಾರಿಯಾ ಫ್ರಾನ್ಸಿಸ್ಕಾ ಪೆರೆಲ್ಲೋ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದು ವಿಮಾ ಕಂಪನಿಯಲ್ಲಿ ಕೆಲಸಕ್ಕಿದ್ದರು, ನಂತರ ಆ ಕೆಲಸ ಬಿಟ್ಟು ರಾಫಾ ನಡಾಲ್ ಫೌಂಡೇಷನ್‌ನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here