ಮಹಿಳಾ ಸಬಲೀಕರಣದ ಹಲವು ಹೆಜ್ಜೆಗಳನ್ನು ನಾವು ನೋಡಿದ್ದೇವೆ. ಮಹಿಳೆಯರಿಂದಲೇ ನಡೆಸಲ್ಪಡುವ ಮೊತ್ತಮೊದಲ ರೈಲ್ವೇ ಸ್ಟೇಷನ್ ಪ್ರಾರಂಭವಾಗಿದೆ. ಇಡೀ ಸ್ಟೇಷನ್ ಮಹಿಳಾ ಸಿಬ್ಬಂದಿ ನಡೆಸಲ್ಪಡುವುದು ಅದ್ಭುತ ಅಲ್ಲವೇ?

ಮತುಂಗ ಉಪನಗರದ ರೈಲ್ವೆ ನಿಲ್ದಾಣ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ತನ್ನ ಹೆಸರನ್ನು ಬರೆದುಕೊಂಡಿದೆ.

“ಇದರ ಹೆಗ್ಗಳಿಕೆಗೆ ಸಿಆರ್ ಜನರಲ್ ಮ್ಯಾನೇಜರ್ ಡಿ. ಕೆ. ಶರ್ಮಾಗೆ ಹೋಗುತ್ತದೆ, ಅವರು ಮಹಿಳೆಯರ ಸಬಲೀಕರಣಕ್ಕೆ ಈ ಹೆಜ್ಜೆಯನ್ನು ಪ್ರಾರಂಭಿಸಿದರು. ಮಾತಂಗಾದಲ್ಲಿ ಮಹಿಳಾ ಸಿಬ್ಬಂದಿ ನೇಮಕಗೊಂಡ ಆರು ತಿಂಗಳ ಬಳಿಕ ಈ ನಿಲ್ದಾಣವು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2018 ರಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಲು ನಮಗೆ ಸಂತೋಷವಾಗಿದೆ “ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply