ಮುಂಬೈ: ಬಿಜೆಪಿ ಸರಕಾರದ ನಿಲುವುಗಳನ್ನು ವಿರುದ್ದ ನಿರಂತರವಾಗಿ ಪಶ್ನಿಸುತ್ತಿರುವ ನವ ನಿರ್ಮಾಣ ಸೇನೆ,ಕಾಂಗ್ರೆಸ್ ಪಕ್ಷ ಸೆ.10 ರಂದು ಕರೆ ನೀಡಿರುವ ಭಾರತ್ ಬಂದ್’ಗೆ ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ತಪ್ಪನ್ನು ಅರಿತುಕೊಳ್ಳಬೇಕೆಂದು ಎಂದು ರಾಜ್ ಠಾಕ್ರೆ ಎಚ್ಚರಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಇದರಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆಸಲಾಗುತ್ತಿರುವ ಭಾರತ್ ಬಂದ್’ಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಬೆಂಬಲ ವ್ಯಕ್ತಪಡಿಸುತ್ತದೆ ಹಾಗೂ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿಕೆ ಹೊರಡಿಸಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅಂತರಾಷ್ಟ್ರೀ ಮಾರುಕಟ್ಟೆಗೆ ಸಂಪರ್ಕಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿವೆ. ದೇಶದ ನೀತಿಗಳನ್ನು ಒಬ್ಬ ವ್ಯಕ್ತಿಯ ಉದ್ದೇಶಗಳು ಹಾಗೂ ಆಶಯಗಳಿಗೆ ಆಧರಿಸಲಾಗುವುದಿಲ್ಲ. ನೋಟು ನಿಷೇಧ ಕೂಡ ದುಷ್ಕೃತ್ಯದ ನಡೆಯಾಯಿತು. ಇದರ ಪರಿಣಾಮ ಆರ್ಥಿಕತೆ ಒಂದು ಅನಿಶ್ಚಿತತೆಗೆ ಬಂದು ನಿಲ್ಲುವಂತೆ ಮಾಡಿತು. ಈ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಮೇಲೆ ದುಬಾರಿ ತೆರಿಗೆಯನ್ನು ವಿಧಿಸಿದೆ. ಈ ಮೂಲಕ ದೇಶದ ಆರ್ಥಿಕತೆಯನ್ನು ಸಾಮಾನ್ಯದತ್ತ ತರಲು ಯತ್ನಿಸುತ್ತಿದೆ. ನಿಮ್ಮ ಕೆಟ್ಟ ಲೆಕ್ಕಾಚಾರಗಳಿಗೆ ಸಾಮಾನ್ಯ ಜನರೇಕೆ ಬೆಲೆ ತೆರಬೇಕು? ಎಂದು ಪ್ರಶ್ನಿಸಿದ್ದಾರೆ.

Leave a Reply