ರಾಜಸ್ತಾನದ ಅಜ್ಮೀರ್ ಬಳಿ ಬಿಜೆಪಿಯ ಚುನಾವಣಾ ಪ್ರಚಾರ ರ್ಯಾಲಿಯೊಂದರ ವೇದಿಕೆಯ ಬಳಿ ಸಚಿವರೊಬ್ಬರು ಮೂತ್ರ ವಿಸರ್ಜನೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಸಚಿವ ಶಂಭು ಸಿಂಗ್ ಕತೇಸರ್ ಎಂಬವರು ಪ್ರಚಾರದ ಫಲಕದ ಬಳಿಯೇ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದರು.

ಇದನ್ನು ವಿವಾದ ಮಾಡಬೇಕಾದ ಅಗತ್ಯವಿಲ್ಲವೆಂದ ಇದೊಂದು ಸಂಕುಚಿತ ಭಾವನೆಯೆಂದೂ ಹೇಳಿದರು. ನಾನು ಮೂತ್ರ ಮಾಡಬೇಕಾದ ಸ್ಥಳದಲ್ಲಿಯೇ ನಿರ್ವಹಿಸಿದ್ದೇನೆಂದು ರ್ಯಾಲಿ ನಡೆಯುವ ಸ್ಥಳದ ಸಮೀಪ ಶೌಚಾಲಯಗಳಿರಲಿಲ್ಲವೆಂದೂ ಮೂತ್ರ ಮಾಡಲು ನನಗೆ ಕಿಲೋಮೀಟರ್ ತನಕ ಹೋಗಲು ಸಾಧ್ಯವಿಲ್ಲವೆಂದು ಹೇಳಿ ತನ್ನನ್ನು ಸಮರ್ಥಿಸಿಕೊಂಡರು.

ಸ್ವಚ್ಚಭಾರತ್ ಅಭಿಯಾನದ ಯೋಜನೆಯನ್ನು ಮೋದಿಯವರು ನಡೆಸುತ್ತಿರುವಾಗಲೇ ಸಾರ್ವಜನಿಕ ಸ್ಥಳದಲ್ಲಿ ಸಚಿವರೊಬ್ಬರು ಮೂತ್ರ ಶಂಕೆ ಮಾಡಿದ್ದು ವಿವಾದವಾಗಿದೆ. ಮುಖ್ಯಮಂತ್ರಿ ವಸುಂದರಾ ರಾಜೆಯವರ ಚಿತ್ರವಿರುವ ಪೋಸ್ಟರ್ ಬಳಿಯಲ್ಲಿ ಮೂತ್ರ ಶಂಕೆ ಮಾಡಿದ್ದರು.

Leave a Reply