ಹತ್ತನೇ ತರಗತಿಯಲ್ಲಿ 95.50% ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಶಾಲೆಯಿಂದ ಕಾರ್ ಉಡುಗೊರೆ ನೀಡಲಾಗಿದೆ.

ಜೈಪುರ್ (ರಾಜಸ್ಥಾನ) ನ ಸ್ಮಾರ್ಟ್ ಕಿಡ್ಸ್ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಂಜು ಕನ್ವರ್ ಗೆ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 95.50% ಅಂಕ ಗಳಿಸಿದ್ದಕ್ಕೆ ಕಾರ್ ಬಹುಮಾನ ವಾಗಿ ನೀಡಲಾಗಿದೆ.
“ಬೋರ್ಡ್ ಪರೀಕ್ಷೆಯಲ್ಲಿ 95% ಗಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಕಾರ್ ಉಡುಗೊರೆಯಾಗಿ ನೀಡುವೆವು” ಎಂದು ನಾವು ಘೋಷಿಸಿದ್ದೆವು ಎಂದು ಶಾಲೆಯ ನಿರ್ದೇಶಕ ಹನುಮಂತ ಸಿಂಗ್ ತಿಳಿಸಿದ್ದಾರೆ.

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಶಾಲೆಯ ನಿರ್ದೇಶಕರು ಕಳೆದ ವರ್ಷ ಈ ಘೋಷಣೆ ಮಾಡಿದ್ದರು. ಆದರೆ ಈ ಸವಾಲನ್ನು ಅಂಜು ಗಂಭೀರವಾಗಿ ಪರಿಗಣಿಸಿದ್ದು, ಈ ಸಾಧನೆ ಮಾಡಿದ್ದಾಳೆ. ಆದ್ದರಿಂದ ಆಕೆಗೆ ಕಾರು ನೀಡುವ ಮೂಲಕ ನಿರ್ದೇಶಕರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅಂಜು ಅವರಿಗೆ ಸರಳ ಸಮಾರಂಭದಲ್ಲಿ ಕಾರನ್ನು ಉಡುಗೊರೆಯಾಗಿ ಶಾಲೆಯ ನಿರ್ದೇಶಕರು ನೀಡಿದರು.

Leave a Reply