ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಯಾವುದೇ ರೀತಿಯ ಮೇಲ್ಮನವಿ ಇಲ್ಲ ಆದರೆ ಮರು ಪರಿಶೀಲನೆಗೆ ಎರಡು ಕಾನೂನು ಆಯ್ಕೆಗಳಿವೆ. ಒಂದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ಆ ಮರುಪರಿಶೀಲನೆ ಅರ್ಜಿ ವಜಾಗೊಂಡರೆ ಬಳಿಕ ಕ್ಯೂರೇಟಿವ್ ಅರ್ಜಿ ಸಲ್ಲಿಸಬಹುದು.  ಎರಡು ಕಾನೂನುಗಳಿಗೆ ತನ್ನದೇ ಆದ ಕೆಲವೊಂದು ಸ್ಥಿರ ನಿಯಮಗಳಿವೆ. ಸುಪ್ರೀಂ ಕೋರ್ಟು ತೀರ್ಪು ನೀಡಿದ ನಿರ್ಧಾರದ ವಿರುದ್ಧ 30 ದಿನಗಳಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು. ಈ ಅರ್ಜಿಯನ್ನು ತೀರ್ಪು ನೀಡಿದ ಅದೇ ನ್ಯಾಯಪೀಠ ಪರಿಗಣಿಸುತ್ತದೆ. ಮಾತ್ರವಲ್ಲ ನ್ಯಾಯಾಲಯದ ತೀರ್ಪಿನಲ್ಲಿ ಸ್ಪಷ್ಟವಾದ ತಪ್ಪುಗಳಿವೆ ಎಂದು ಪರಿಶೀಲನಾ ಅರ್ಜಿಯ ಮೂಲಕ ಸಾಬೀತುಪಡಿಸಬೇಕು. ಈ ಮರುಪರಿಶೀಲನಾ ಅರ್ಜಿ ಬಗ್ಗೆ ಸಾಮಾನ್ಯವಾಗಿ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಿಲ್ಲ. ನ್ಯಾಯಪೀಠದ ನ್ಯಾಯಾಂಗ ಕೊಠಡಿಯಲ್ಲಿ ವಿಚಾರಣೆ ನಡೆಯುತ್ತದೆ. ಇಲ್ಲಿ ವಕೀಲರ ವಾದಗಳಿಗೆ ಪ್ರಸಕ್ತಿ ಇಲ್ಲ. ಕೇಸ್ ಫೈಲ್ ಗಳು ಮತ್ತು ದಾಖಲೆಗಳನ್ನು ಮಾತ್ರ ಅರ್ಜಿಯ ಮುಖಾಂತರ ಪರಿಗಣಿಸಲಾಗುತ್ತದೆ.

ಎರಡನೇದು Curative petition ಕ್ಯೂರಿಯವರು ಪಿಟಿಷನ್. ಈ ಅರ್ಜಿಯ ನಿಯಮಗಳು ಇನ್ನಷ್ಟು ಕಠಿಣವಾಗಿದೆ. ಈ ಅರ್ಜಿಯನ್ನು ಸಲ್ಲಿಸಲು ಹಿರಿಯ ಸಲಹೆಗಾರರ ಪ್ರಮಾಣಪತ್ರಗಳು ಪಡೆದುಕೊಳ್ಳಬೇಕು. ಅರ್ಜಿಯಲ್ಲಿ ಕೇವಲ ಕಾನೂನು ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

LEAVE A REPLY

Please enter your comment!
Please enter your name here